ಚೀನಾ: 2,000 ದಾಟಿದ ಸಾವಿನ ಸಂಖ್ಯೆ

Update: 2020-02-19 18:30 GMT

ಬೀಜಿಂಗ್, ಫೆ. 19: ಚೀನಾದಲ್ಲಿ ಭೀಕರ ನೂತನ-ಕೊರೋನವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಬುಧವಾರ 2,000ವನ್ನು ದಾಟಿದೆ. ಸೋಂಕಿನ ಭೀಕರ ದಾಳಿಗೆ ಒಳಗಾದ ಹುಬೈ ಪ್ರಾಂತದಲ್ಲಿ ಒಂದು ದಿನದ ಅವಧಿಯಲ್ಲಿ ಹೊಸದಾಗಿ 132 ಮಂದಿ ಮೃತಪಟ್ಟಿದ್ದಾರೆ.

ಒಂದು ದಿನದಲ್ಲಿ ಹೊಸದಾಗಿ 1,693 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ತನ್ನ ದೈನಂದಿನ ವರದಿಯಲ್ಲಿ ಹುಬೈ ಪ್ರಾಂತದ ಆರೋಗ್ಯ ಆಯೋಗ ತಿಳಿಸಿದೆ. ಇದರೊಂದಿಗೆ ಚೀನಾದಲ್ಲಿ ಸೋಂಕು ಪೀಡಿತರಾಗಿರುವವರ ಒಟ್ಟು ಸಂಖ್ಯೆ 74,000ವನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News