ಪಾಕಿಸ್ತಾನ ಪರ ಜೈಕಾರ ಹಾಕಿದವರಿಗೆ ಸ್ಟೇಷನ್ ಬೇಲ್ ನೀಡಿರುವುದು ಅಪರಾಧ: ಸಂಸದ ಪ್ರತಾಪ್ ಸಿಂಹ

Update: 2020-02-20 18:59 GMT

ಮೈಸೂರು,ಫೆ.20: ಪಾಕಿಸ್ತಾನ ಪರ ಜೈಕಾರ ಕೂಗಿದ ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡಿರುವ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಫ್ರೀ ಕಾಶ್ಮೀರ ಫ್ಲೆಕಾರ್ಡ್ ಪ್ರದರ್ಶನಕ್ಕಿಂತಲೂ ಇದು ಗಂಭೀರ ಪ್ರಕರಣ. ದೇಶದ್ರೋಹದಂತಹ ಪ್ರಕರಣಕ್ಕೂ ಅದ್ಯಾವ ರೀತಿ ಸ್ಟೇಷನ್ ಬೇಲ್ ಕೊಟ್ಟರೋ ಗೊತ್ತಿಲ್ಲ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರಿಗೆ ಜಾಮೀನು ಕೊಟ್ಟಿರುವುದು ದೊಡ್ಡ ತಪ್ಪು. ಸ್ಟೇಷನ್ ಬೇಲ್ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರನ್ನು ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾರೆ ಎಂದರೆ ಇದಕ್ಕಿಂತ ದುರಾದೃಷ್ಟಕರ ಸಂಗತಿ ಮತ್ತೊಂದು ಇಲ್ಲ. ಇದು ನಮ್ಮ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ. ದೇಶದ್ರೋಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದವರಿಗೆ ಬೇಲ್ ಕ್ಯಾನ್ಸಲ್ ಮಾಡಬೇಕು. ಮತ್ತೆ ಅವರ ವಿರುದ್ಧ ದೇಶದ್ರೋಹದ ಕೇಸ್ ಹಾಕಿ ವಿಚಾರಣೆ ಮಾಡಬೇಕು. ಸೂಕ್ತ ವಿಚಾರಣೆ ನಡೆಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ನಮ್ಮ ದೇಶ, ನಾಡಿನಲ್ಲಿ ನಮ್ಮ ಪ್ರಯೋಜನ ಪಡೆದು ದೇಶ ದ್ರೋಹ ಬಗೆಯೋದು ಸರಿಯಲ್ಲ ಎಂದು ಕಿಡಿಕಾರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News