ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-02-21 18:25 GMT

ವಿದ್ಯಾರ್ಥಿವೇತನ

(ಅಂತರ್ ರಾಷ್ಟ್ರೀಯ ಮಟ್ಟ):

ಯುಸಿಡಿ ಮೈಕೆಲ್ ಸ್ಮರ್ಫಿಟ್ ಗ್ರಾಜುವೇಟ್ ಬಿಸಿನೆಸ್ ಸ್ಕೂಲ್ ಎಂಎಸ್ಸಿ ಸ್ಕಾಲರ್‌ಶಿಪ್ಸ್ 2020

ವಿವರ: ಡಬ್ಲಿನ್‌ನ ಯುಸಿಡಿ ಮೈಕೆಲ್ ಸ್ಮರ್ಫಿಟ್ ಗ್ರಾಜುವೇಟ್ ಬಿಸಿನೆಸ್ ಸ್ಕೂಲ್ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಂದ ಎಂಎಸ್ಸಿ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಎಂಎಸ್ಸಿಗೆ ಅರ್ಜಿ ಸಲ್ಲಿಸಿದವರು ಅರ್ಹರಾಗಿದ್ದು ಶೇ. 50 ಶುಲ್ಕ ಕಡಿತ ಮಾಡಲಾಗುವುದು.

ಅರ್ಹತೆ: ಸ್ಮರ್ಫಿಟ್ ಗ್ರಾಜುವೇಟ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಎಸ್ಸಿ ಪದವಿ ಅಧ್ಯಯನಕ್ಕೆ ಪ್ರವೇಶ ಪಡೆಯಲು ಆಹ್ವಾನ ಗಳಿಸಿದ, 650 ಅಥವಾ ಅದಕ್ಕಿಂತ ಹೆಚ್ಚು ಜಿಎಂಎಟಿ ಅಂಕ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎಂಎಸ್ಸಿ ಪದವಿ ಅಧ್ಯಯನದ ಶುಲ್ಕದಲ್ಲಿ ಶೇ. 50 ಕಡಿತ ಮಾಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/UMS1

**************

ವಿದ್ಯಾರ್ಥಿವೇತನ

(ಅಂತರ್ ರಾಷ್ಟ್ರೀಯ ಮಟ್ಟ):

ಆರೆಂಜ್ ಟ್ಯುಲಿಪ್ ಸ್ಕಾಲರ್‌ಶಿಪ್ ಇಂಡಿಯಾ 2020-21

ವಿವರ: ನೆದರ್‌ಲ್ಯಾಂಡ್‌ನ ಯಾವುದಾದರೊಂದು ವಿವಿಯಲ್ಲಿ ಪ್ರವೇಶ ಪಡೆದಿರುವ ಅಥವಾ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಶೇ. 100 ಬೋಧನಾ ಶುಲ್ಕ ಮರುಪಾವತಿಸಲಾಗುವುದು.

ಅರ್ಹತೆ:  ನೆದರ್‌ಲ್ಯಾಂಡ್‌ನ ಯಾವುದಾದರೊಂದು ವಿವಿಯಲ್ಲಿ ಪ್ರವೇಶ ಪಡೆದಿರುವ ಅಥವಾ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಭಾರತೀಯ ವಿದ್ಯಾರ್ಥಿಗಳು (ಈಗ ನೆದರ್‌ಲ್ಯಾಂಡ್‌ನಲ್ಲಿ ಅಧ್ಯಯನ ಮಾಡುತ್ತಿರಬಾರದು ಅಥವಾ ಕೆಲಸ ಮಾಡುತ್ತಿರಬಾರದು) ಅರ್ಜಿ ಸಲ್ಲಿಸಬಹುದು.

ನೆರವು:  ಆಯ್ಕೆಯಾದ ಅಭ್ಯರ್ಥಿಗಳಿಗೆ ಶೇ. 100 ಬೋಧನಾ ಶುಲ್ಕ ಮನ್ನಾ ಮಾಡಲಾಗುವುದು. ಆದರೆ ವಿದ್ಯಾರ್ಥಿ ನೋಂದಣಿಗೊಳ್ಳುವ ವಿವಿಯ ಮೇ ಲೆ ಪುರಸ್ಕಾರ ಆಧರಿಸಿದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 1, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/OTS7

**************

ವಿದ್ಯಾರ್ಥಿವೇತನ

(ಅಂತರ್ ರಾಷ್ಟ್ರೀಯ ಮಟ್ಟ):

ಫೇಕಲ್ಟಿ ಆಫ್ ಇಂಜಿನಿಯರಿಂಗ್ ಮೆಮೊರಿಯಲ್ ಸ್ಕಾಲರ್‌ಶಿಪ್ 2020

ವಿವರ: ಪ್ರಥಮ ವರ್ಷದ ಇಂಜಿನಿಯಿರಿಂಗ್ (ಕಂಪ್ಯೂಟರ್ ಇಂಜಿನಿಯರಿಂಗ್ ಹೊರತುಪಡಿಸಿ)ಗೆ ಇತ್ತೀಚೆಗೆ ದಾಖಲಾತಿ ಪಡೆದಿರುವ ಮಹಿಳಾ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪ್ರಯೋಜನ ಪಡೆಯಬಹುದು.

ಇಂಜಿನಿಯರಿಂಗ್ ಬೋಧನಾ ವಿಭಾಗದಲ್ಲಿ ಹೊಸದಾಗಿ ದಾಖಲಾತಿ ಪಡೆದಿರುವ ಅತ್ಯುತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ 2,000 ಕೆನಡ ಡಾಲರ್ ಮೊತ್ತದ ಆಥಿಕರ್ ನೆರವು ನೀಡುವ ಉದ್ದೇಶವಿದೆ.

ಅರ್ಹತೆ: ಕೆನಡಾದ ಒಟ್ಟಾವ ವಿವಿಯಲ್ಲಿ ಇಂಜಿನಿಯರಿಂಗ್ ಬೋಧನೆ ವಿಭಾಗದಲ್ಲಿ ಪೂರ್ಣಾವಧಿ ಕೋರ್ಸ್‌ನ ಪ್ರಥಮ ವರ್ಷಕ್ಕೆ ನೋಂದಣಿಯಾಗಿರುವ ಮಹಿಳಾ ವಿದ್ಯಾರ್ಥಿಗಳು ಅರ್ಹರು.

ನೆರವು:  ಆಯ್ಕೆಯಾದ ಅಭ್ಯರ್ಥಿಗಳಿಗೆ 2,000 ಮೊತ್ತದ ಕೆನಡ ಡಾಲರ್ ಆರ್ಥಿಕ ನೆರವು ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/FMM1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News