ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ 6 ತಿಂಗಳ ಬಳಿಕ ಸೋಮವಾರದಿಂದ ಶಾಲೆಗಳು ಪುನಾರಂಭ

Update: 2020-02-23 17:34 GMT

ಹೊಸದಿಲ್ಲಿ, ಫೆ. 23: ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಮುಚ್ಚಿದ್ದ ಶಾಲೆಗಳು ಸೋಮವಾರ ತೆರೆಯಲಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭೇಟಿಗೆ ಭಾರತಕ್ಕೆ ಆಗಮಿಸುವ ಸಂದರ್ಭದಲ್ಲೇ ಈ ಶಾಲೆಗಳು ಮರು ಆರಂಭವಾಗುತ್ತಿವೆ.

ಭದ್ರತೆ ಹಿನ್ನೆಲೆಯಲ್ಲಿ ದೀರ್ಘಕಾಲದ ಚಳಿಗಾಲದ ರಜೆಯ ಮುನ್ನ ಶಾಲೆಯನ್ನು ಐದು ತಿಂಗಳ ಕಾಲ ಮುಚ್ಚಲಾಗಿತ್ತು. ಅತಿ ದೊಡ್ಡ ತೀರ್ಮಾನದ ಕಾರಣದಿಂದ ಕೇಂದ್ರ ಸರಕಾರ ತೆಗೆದುಕೊಂಡ ಹಲವು ಮುನ್ನೆಚ್ಚರಿಕಾ ಕ್ರಮಗಳಲ್ಲಿ ಇದು ಒಂದು ಭಾಗವಾಗಿತ್ತು.

ನಾಳೆ ಶಾಲೆ ಆರಂಭಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಶಾಲೆ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆ ವರೆಗೆ ಕಾರ್ಯಾಚರಿಸಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಮುಹಮ್ಮದ್ ಯೂನಿಸ್ ಮಲಿಕ್ ಹೇಳಿದ್ದಾರೆ.

ಶಾಲೆಯ ಪಠ್ಯಕ್ರಮವನ್ನು ಸಮಯ ಮಿತಿ ಒಳಗೆಡ ಪೂರ್ಣಗೊಳಿಸಲು ಇಮ್ಮಡಿ ಶ್ರಮ ಹಾಕಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ತಿಳಿಸಿದ್ದಾರೆ.

ಸಮಯೋಚಿತ ಸಾಧನೆಗಾಗಿ ಶೈಕ್ಷಣಿಗೆ ಯೋಜನೆ ಅನುಸರಿಸಲು ಶಾಲೆಗಳಿಗೆ ನಿರಂತರ ಭೇಟಿ ನೀಡಲು ಕ್ಷೇತ್ರ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News