ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ

Update: 2020-02-26 10:42 GMT

ಹೊಸದಿಲ್ಲಿ, ಪೆ. 25: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಈಶಾನ್ಯ ದಿಲ್ಲಿಯಲ್ಲಿ ಮಂಗಳವಾರ ಗುಂಡಿನ ದಾಳಿಯಿಂದ ಮೃತಪಟ್ಟ ದಿಲ್ಲಿ ಪೊಲೀಸ್ ಅಧಿಕಾರಿ ರತನ್ ಲಾಲ್ ಅವರ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆಯಾಗಿದೆ.

ದಿಲ್‌ಶಾದ್ ಗಾರ್ಡನ್ಸ್‌ನಲ್ಲಿರುವ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಲಾಲ್ ಅವರ ಸಾವಿಗೆ ಕಾರಣವಾದ ಬುಲೆಟ್ ಎಡ ತೋಳಿನಿಂದ ಪ್ರವೇಶಿಸಿದ್ದು, ಬಲ ತೋಳಿನಲ್ಲಿ ಪತ್ತೆಯಾಗಿದೆ ಎಂದು ವರದಿ ಹೇಳಿದೆ.

ಅಧಿಕಾರಿಯ ಪಾರ್ಥಿವ ಶರೀರವನ್ನು ಉತ್ತರ ದಿಲ್ಲಿಯ ಬುರಾರಿಯಲ್ಲಿರುವ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದೆ. ಅನಂತರ ಅವರ ಹುಟ್ಟೂರಾದ ರಾಜಸ್ಥಾನದ ಸಿಕಾರ್ ಜಿಲ್ಲೆಯ ಫತೇಪುರ ತಿಹ್ವಾಲಿಗೆ ಕೊಂಡೊಯ್ದು ಅಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದಿಷ್ಟ ಲಿಖಿತ ಭರವಸೆ ನೀಡದ ಹೊರತು ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಗ್ರಾಮದ ನಿವಾಸಿಗಳು ಹೇಳಿದ್ದಾರೆ. ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಕೆಲಸ ಹಾಗೂ ಹೆತ್ತವರಿಗೆ ಪಿಂಚಣಿ ನೀಡುವಂತೆ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News