ಖ್ಯಾತ ಟೆನಿಸ್ ತಾರೆ ಮರಿಯಾ ಶರಪೋವಾ ವಿದಾಯ

Update: 2020-02-26 14:17 GMT

ಪ್ಯಾರಿಸ್, ಫೆ.26: ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಹಾಗೂ ವಿಶ್ವದ ಓರ್ವ ಖ್ಯಾತ ಕ್ರೀಡಾ ತಾರೆ ಮರಿಯಾ ಶರಪೋವಾ ಬುಧವಾರ ಟೆನಿಸ್‌ಗೆ ವಿದಾಯ ಹೇಳಿದರು.

‘‘ಟೆನಿಸ್- ನಾನು ವಿದಾಯ ಹೇಳುತ್ತಿದ್ದೇನೆ’’ ಎಂದು ನಿಯತಕಾಲಿಕವೊಂದಕ್ಕೆ 32ರ ಹರೆಯದ ಶರಪೋವಾ ತಿಳಿಸಿದರು.

28 ವರ್ಷಗಳ ನಂತರ ಹಾಗೂ ಐದು ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಬಳಿಕ ಮತ್ತೊಮ್ಮೆ ಪರ್ವತ ಏರಲು ನಾನು ಸಿದ್ಧನಾಗಿರುವೆ ಎಂದು ಶರಪೋವಾ ನುಡಿದರು.

ಅತ್ಯಂತ ಕಿರಿಯ ವಯಸ್ಸಿನಲ್ಲಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಬೆಳಕಿಗೆ ಬಂದಿದ್ದ ಶರಪೋವಾ 2016ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉದ್ದೀಪನಾಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು. ಮಾಜಿ ವಿಶ್ವದ ನಂ.1 ಆಟಗಾರ್ತಿಯಾಗಿರುವ ರಶ್ಯದ ಶರಪೋವಾ ಪ್ರಸ್ತುತ 373ನೇ ರ್ಯಾಂಕಿನಲ್ಲಿದ್ದಾರೆ.

ದೀರ್ಘ ಸಮಯದಿಂದ ಕಾಡುತ್ತಿರುವ ಭುಜನೋವಿನಿಂದಾಗಿ ಶರಪೋವಾ ಕಳೆದ ಒಂದು ವರ್ಷದಿಂದ ಟೆನಿಸ್‌ನಲ್ಲಿ ಸಕ್ರಿಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News