ಹಿಂಸಾಚಾರದ ಹಿಂದೆ ಭಾರೀ ದೊಡ್ಡ ಸಂಚು: ಸೋನಿಯಾ

Update: 2020-02-27 05:56 GMT

ಹೊಸದಿಲ್ಲಿ,ಫೆ.26: ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಹಿಂದೆ ಭಾರೀ ದೊಡ್ಡ ಸಂಚಿದೆಯೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಆಪಾದಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರ ರಾಜೀನಾಮೆಯನ್ನು ಅವರು ಆಗ್ರಹಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘‘ಕಳೆದ ಒಂದು ವಾರದಿಂದ ಗೃಹ ಸಚಿವರು ಏನು ಮಾಡುತ್ತಿದ್ದರು?. ಈಶಾನ್ಯ ದಿಲ್ಲಿಯಲ್ಲಿ ಪರಿಸ್ಥಿತಿ ಹದಗೆಡುತ್ತಿದೆಯೆಂದು ಗೃಹ ಸಚಿವಾಲಯಕ್ಕೆ ಗೋಚರವಾಗಿದ್ದರೂ ಯಾಕೆ ಅರೆಸೈನಿಕ ಪಡೆಳನ್ನು ಕರೆಸಿಕೊಳ್ಳಲಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷೆ ಪ್ರಶ್ನಿಸಿದರು. ಗೃಹ ಸಚಿವರು ಸೇರಿದಂತೆ ಕೇಂದ್ರ ಸರಕಾರ ಗಲಭೆಗೆ ಹೊಣೆಗಾರನಾಗಿದೆ ಎಂದು ಅವರು ಹೇಳಿದರು.

 ಸತತ ಮೂರು ದಿನಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ದಿಲ್ಲಿ ವಸ್ತುಶಃ ರಣಾಂಗಣವಾಗಿ ಪರಿಣಮಿಸಿದೆ. ಬುಧವಾರವೂ ಉದ್ರಿಕ್ತ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಸಿಬಿಎಸ್‌ಇ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ನಡುವೆ ಈಶಾನ್ಯ ದಿಲ್ಲಿಯಾದ್ಯಂತ ಸಾರ್ವಜನಿಕ ಸಭೆ, ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News