ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಐಎಎಸ್ ಅಧಿಕಾರಿ

Update: 2020-03-03 13:06 GMT
ಫೋಟೊ : indiatoday

ರಾಂಚಿ :  ಜಾರ್ಖಂಡ್‍ನ ಗೊಡ್ಡಾ ಪ್ರಾಂತ್ಯದಲ್ಲಿ ತಮ್ಮ ಹೆರಿಗೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಇತರರಿಗೆ ಮಾದರಿಯಾದ ಐಎಎಸ್ ಅಧಿಕಾರಿ, ಗೊಡ್ಡಾ ಜಿಲ್ಲಾಧಿಕಾರಿ ಕಿರಣ್ ಕುಮಾರ್ ಪಸಿ ಶ್ಲಾಘನೆಗೊಳಗಾಗಿದ್ದಾರೆ.

ಗೊಡ್ಡಾ ಎಂಬಲ್ಲಿನ ಸದರ್ ಆಸ್ಪತ್ರೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಹಿಂದೇಟು ಹಾಕುವವರಿಗೆ ಈ ಅಧಿಕಾರಿ ಮಾದರಿಯಾಗಿದ್ದಾರೆ ಎಂದು ಹಲವರು ಬಣ್ಣಿಸಿದ್ದಾರೆ. ತಮ್ಮ ನವಜಾತ ಶಿಶುವಿನೊಂದಿಗೆ ಆಸ್ಪತ್ರೆಯಲ್ಲಿ ಮಲಗಿರುವ ಕಿರಣ್ ಅವರ ಚಿತ್ರ ಕೂಡ ವೈರಲ್ ಆಗಿದೆ.

''ತಾಯಿ, ಮಗು ಆರೋಗ್ಯದಿಂದಿದ್ದಾರೆ. ಆಕೆ ಇಲ್ಲಿಗೆ ಬಂದಿದ್ದು ನಮಗೆ ಹೆಮ್ಮೆಯ ಸಂಗತಿ'' ಎಂದು ಆಸ್ಪತ್ರೆಯ ಸರ್ಜನ್ ಎಸ್‍ಪಿ ಮಿಶ್ರಾ ಹೇಳಿದ್ದಾರೆ.

ದಿಯೋಘರ್ ಡಿಸಿ ಸಹಿತ ಹಲವು ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಕಿರಣ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News