ಎಸೆಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ: 14 ಬಾಲಕರ ವಿಚಾರಣೆ

Update: 2020-03-03 16:56 GMT

ಬೆಂಗಳೂರು, ಮಾ.3: ಇತ್ತೀಚೆಗೆ ಜರುಗಿದ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ(ಪ್ರಿಪರೇಟರಿ)ಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಉತ್ತರ ವಿಭಾಗದ ಪೊಲೀಸರು 14 ಅಪ್ರಾಪ್ತ ಬಾಲಕರನ್ನು ವಿಚಾರಣೆಗೊಳಪಡಿಸಿದ್ದಾರೆ. 

ಹಲೋ ಆ್ಯಪ್‌ನಲ್ಲಿ ರಾಕೇಶ್ 8105 ಎಂಬ ಹೆಸರಿನಲ್ಲಿ ಎಸೆಸೆಲ್ಸಿ ಗಣಿತ ವಿಷಯದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವ ಪ್ರಕರಣ ಸಂಬಂಧ ಪ್ರೌಢಶಾಲಾ ಮಂಡಳಿ ನಿರ್ದೇಶಕ ಬಸವರಾಜ್ ಅವರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶೋಧ ಕಾರ್ಯ ಕೈಗೊಂಡು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಶಂಕಿತ 14  ಬಾಲಕರನ್ನು ಠಾಣೆಗೆ ಕರೆತಂದಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರಬಹುದೆಂಬ ಹಿನ್ನೆಲೆಯಲ್ಲಿ ಶಂಕಿತ 14 ಬಾಲಕರ ಪೈಕಿ 12 ಮಂದಿ ಎಸೆಸೆಲ್ಸಿ ವಿದ್ಯಾರ್ಥಿಗಳು, ಒಬ್ಬ ಪಿಯುಸಿ ವಿದ್ಯಾರ್ಥಿ ಹಾಗೂ ಮತ್ತೊಬ್ಬನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News