ಚಿಕ್ಕಮಗಳೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Update: 2020-03-06 12:12 GMT

ಚಿಕ್ಕಮಗಳೂರು, ಮಾ.6: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ರೈತ ಲೋಕೇಶ್(53) ಆತ್ಮಹತ್ಯೆ ಮಾಡಿಕೊಂಡಿರುವ ರೈತರಾಗಿದ್ದು, ಗ್ರಾಮದಲ್ಲಿ ತಮ್ಮ ಮೂರು ಎಕರೆ ಜಾಗದಲ್ಲಿ ಅಡಕೆ ತೋಟ ಮಾಡಲು ಲೋಕೇಶ್ ಅವರು ಸ್ಥಳೀಯ ಕೋಆಪರೇಟಿವ್ ಬ್ಯಾಂಕ್‍ನಲ್ಲಿ ಒಂದೂವರೆ ಲಕ್ಷ ರೂ. ಹಾಗೂ ಕೆನರಾ ಬ್ಯಾಂಕ್‍ನಲ್ಲಿ ನಾಲ್ಕೂವರೆ ಲಕ್ಷ ರೂ. ಸೇರಿ ಒಟ್ಟು ಆರು ಲಕ್ಷ ರೂ. ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ.

ಈ ಹಣದಲ್ಲಿ ಮೂರು ಎಕರೆ ಜಾಗದಲ್ಲಿ ಅಡಕೆ ಗಿಡಗಳನ್ನು ಬೆಳೆಸಿದ್ದ ಲೋಕೇಶ್ ಇತ್ತೀಚೆಗೆ ತೀವ್ರ ಬರದಿಂದ ನೀರನ್ನು ತೋಟಕ್ಕೆ ಸಮರ್ಪಕವಾಗಿ ಪೂರೈಸಲಾಗದೇ ತೋಟ ಬಿಸಿಲಿನಿಂದ ಒಣಗಿ ಹೋಗಿತ್ತು. ಇದರಿಂದ ಬೇಸತ್ತ ರೈತ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಂಬಂದ ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News