ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-03-06 18:24 GMT

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಜಿಐಐಎಸ್ ಸಿಂಗಾಪುರ್ ಗ್ಲೋಬಲ್ ಸಿಟಿಜನ್ ಸ್ಕಾಲರ್‌ಶಿಪ್ 2020

ವಿವರ: 10ನೇ ತರಗತಿ ತೇರ್ಗಡೆಯಾಗಿರುವ, ಇಂಗ್ಲಿಷನ್ನು ಪ್ರಥಮ ಭಾಷೆಯಾಗಿ ಅಧ್ಯಯನ ನಡೆಸಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆ: 10ನೇ ತರಗತಿ ತೇರ್ಗಡೆಯಾಗಿರುವ ಭಾರತೀಯ ವಿದ್ಯಾರ್ಥಿಗಳು, 9ನೇ ಮತ್ತು 10ನೇ ತರಗತಿಯ ಎಲ್ಲಾ ಪರೀಕ್ಷೆಗಳಲ್ಲೂ ಎ ಗ್ರೇಡ್(ಸಿಬಿಎಸ್‌ಇ ವಿದ್ಯಾರ್ಥಿಗಳು) ಅಥವಾ ಶೇ.80 ಮತ್ತು ಅಧಿಕ (ಐಸಿಎಸ್‌ಇ ವಿದ್ಯಾರ್ಥಿಗಳು) ಅಂಕ ಗಳಿಸಿರುವವರು ಅರ್ಜಿ ಸಲಿ್ಲಸಬಹುದು.

ನೆರವು:  ಆಯ್ಕೆಯಾದ ವಿದ್ಯಾರ್ಥಿಗಳಿಗೆ 90,000 ಸಿಂಗಾಪುರ ಡಾಲರ್ ಆರ್ಥಿಕ ನೆರವು ಒದಗಿಸಲಾಗುವುದು. (ಎರಡು ವರ್ಷದ ಬೋಧನಾ ಶುಲ್ಕ, ಊಟ, ವಸತಿ ವೆಚ್ಚ ಮತ್ತು ಪ್ರಯಾಣ ವೆಚ್ಚ).

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 10, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/GSG2

************

ವಿದ್ಯಾರ್ಥಿವೇತನ

(ಅಂತರ್ ರಾಷ್ಟ್ರೀಯ ಮಟ್ಟ):

ಎಲ್‌ಎಲ್‌ಸಿ ಮಾಸ್ಟರ್ಸ್ಲ ಸ್ಕಾರ್‌ಶಿಪ್ಸ್, ಎಡಿನ್‌ಬರ್ಗ್ ವಿವಿ, 2020-21

ವಿವರ: ಬ್ರಿಟನ್‌ನ ಎಡಿನ್‌ಬರ್ಗ್ ವಿವಿಯಲ್ಲಿ 2020-21ರ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಅಧ್ಯಯನ ಆರಂಭಿಸಲು ಆಸಕ್ತರಾಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಎಡಿನ್‌ಬರ್ ವಿವಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ.

ಅರ್ಹತೆ: ಎಡಿನ್‌ಬರ್ಗ್ ವಿವಿಯ ಸ್ಕೂಲ್ ಆಫ್ ಲಿಟರೇಚರ್ಸ್, ಲ್ಯಾಂಗ್ವೇಜಸ್ ಆ್ಯಂಡ್ ಕಲ್ಚರ್ಸ್ ನಲ್ಲಿ ಯಾವುದಾದರೂ ಅರ್ಹ ಆನ್-ಕ್ಯಾಂಪಸ್ ಸ್ನಾತಕೋತ್ತರ ಅಧ್ಯಯನಕ್ಕೆ ದಾಖಲಾತಿ ಪಡೆಯಲು ಅರ್ಜಿ ಸಲ್ಲಿಸಿದವರು ಅರ್ಹರಾಗಿದ್ದಾರೆ.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳು ಗರಿಷ್ಠ 1 ವರ್ಷದ ಅವಧಿಗೆ ಬೋಧನಾ ಶುಲ್ಕದ ಪ್ರಯೋಜನ ಪಡೆಯುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 1, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/LMS4

************

ವಿದ್ಯಾರ್ಥಿವೇತನ

(ಅಂತರ್ ರಾಷ್ಟ್ರೀಯ ಮಟ್ಟ):

ಟೆರಿ ಹೆನ್ನೆಸಿ ಮೈಕ್ರೊಬಯಾಲಜಿ ಫೆಲೊಶಿಪ್ 2020

ವಿವರ: ಸಾಂಕ್ರಾಮಿಕ ರೋಗ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುವ ಅನ್ವೇಷಕರಿಗೆ ಬ್ರಿಟಿಷ್ ಸೊಸೈಟಿ ಫಾರ್ ಆ್ಯಂಟಿಮೈಕ್ರೋಬಿಯಲ್ ಕೆೆಮೊಥೆರಪಿ ನೀಡುವ ಫೆಲೊಶಿಪ್ ಇದಾಗಿದೆ. ಉತ್ತಮ ಸಂಶೋಧನಾ ಕಾರ್ಯ ನಿರ್ವಹಿಸಲು ಆರ್ಥಿ ಸೌಲಭ್ಯ ಒದಗಿಸುವ ಉದ್ದೇಶವಿದೆ.

ಅರ್ಹತೆ:  ಸಾಂಕ್ರಾಮಿಕ ರೋಗ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ಯುವ ಅನ್ವೇಷಕರು, 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಅಮೆರಿಕದಲ್ಲಿ ನಡೆಯುವ ವಾರ್ಷಿಕ ಎಎಸ್‌ಎಮ್ ಮೈಕ್ರೋಮ್ ಸಭೆಯಲ್ಲಿ ಪ್ರಬಂಧ ಮಂಡಿಸಲು 1,500 ಗ್ರೇಟ್‌ಬ್ರಿಟನ್ ಪೌಂಡ್ ಆರ್ಥಿಕ ನೆರವು ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 10, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/THM1

************

ವಿದ್ಯಾರ್ಥಿವೇತನ

(ಆದಾಯ ಆಧಾರಿತ):

ಶ್ರೀರಾಮ್ ಕ್ಯಾಪಿಟಲ್ ಸ್ಕಾಲರ್‌ಶಿಪ್ 2019-20

ವಿವರ:  ವಾಣಿಜ್ಯ ವಾಹನ ಚಾಲಕರ ಮಕ್ಕಳಿಂದ ಶ್ರೀರಾಮ್ ಕ್ಯಾಪಿಟಲ್ ಲಿಮಿಟೆಡ್ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ. 9ನೇ ತರಗತಿ ತೇರ್ಗಡೆಯಾಗಿರಬೇಕು ಮತ್ತು 10, 11 ಅಥವಾ 12ನೇ ತರಗತಿಯಲ್ಲಿ ಕಲಿಯುತ್ತಿರಬೇಕು.

ಅರ್ಹತೆ: ವಾಣಿಜ್ಯ ವಾಹನ ಚಾಲಕರ ಮಕ್ಕಳು ಅಥವಾ ಕುಟುಂಬದವರು ಅರ್ಹರು. 10, 11 ಅಥವಾ 12ನೇ ತರಗತಿಯಲ್ಲಿ ಕಲಿಯುತ್ತಿರಬೇಕು. ಕುಟುಂಬದ ವಾರ್ಷಿಕ ವರಮಾನ 4 ಲಕ್ಷರೂ.ಗಿಂತ ಕಡಿಮೆ ಇರಬೇಕು.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ 15,000 ರೂ. ಆರ್ಥಿಕ ನೆರವು ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 15, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/SCS1

************

ವಿದ್ಯಾರ್ಥಿವೇತನ

(ಆದಾಯ ಆಧಾರಿತ):

ಎಸ್‌ಟಿಎಫ್‌ಸಿ ಮೆರಿಟೋರಿಯಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

ವಿವರ: ಅವಕಾಶ ವಂಚಿತ, ದುರ್ಬಲ ಕುಟುಂಬದ ವಾಹನ ಚಾಲಕರ ಕುಟುಂಬದ ವಿದ್ಯಾರ್ಥಿಗಳಿಗೆ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿ ನೀಡುವ ಸ್ಕಾಲರ್‌ಶಿಪ್. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 10 ಮತ್ತು 12ನೇ ತರಗತಿಯ ಬಳಿಕ ವೃತ್ತಿಪರ ಕೋರ್ಸ್ ಅಧ್ಯಯನಕ್ಕೆ ಬಹುವರ್ಷದ ಸ್ಕಾಲರ್‌ಶಿಪ್ ಒದಗಿಸಲಾಗುವುದು.

ಅರ್ಹತೆ: ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್ ಗಳಿಗೆ, ಅಥವಾ ಪದವಿ/ಇಂಜಿನಿಯರಿಂಗ್(3ರಿಂದ 4 ವರ್ಷದ)ಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಬಹುದು. ಅರ್ಜಿದಾರರು ವಾಣಿಜ್ಯ ವಾಹನದ ಚಾಲಕರ ಕುಟುಂಬದವರಾಗಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ. ಒಳಗಿರಬೇಕು.

ನೆರವು:  ಆಯ್ಕೆಯಾದ ಐಟಿಐ/ಪಾಲಿಟೆಕ್ನಿಕ್/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ 15,000 ರೂ.(ಗರಿಷ್ಠ 3 ವರ್ಷಕ್ಕೆ), ಪದವಿ, ಇಂಜಿನಿಯರಿಂಗ್‌ಗೆ ವಾರ್ಷಿಕ 35,000 ರೂ. (ರಿಷ್ಠ 4 ವರ್ಷ) ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 15, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/STFC1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News