ಟಿಪ್ಪರ್ ಢಿಕ್ಕಿ: ಶಾಲಾ ವಿದ್ಯಾರ್ಥಿನಿ ಮೃತ್ಯು; ಉದ್ರಿಕ್ತ ಗ್ರಾಮಸ್ಥರಿಂದ ಟಿಪ್ಪರ್ ಗೆ ಬೆಂಕಿ

Update: 2020-03-09 07:11 GMT

ದಾವಣಗೆರೆ, ಮಾ.9: ಮರಳು ಸಾಗಾಟದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ದಿವ್ಯಾ ಪಾಟೀಲ್(14) ಸಾವನ್ನಪ್ಪಿರುವ ಶಾಲಾ ಬಾಲಕಿ. ಈಕೆ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಘಟನೆಯ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರು ಟಿಪ್ಪರ್‌ಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ನ್ಯಾಮತಿ ಪೊಲೀಸರ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಮರಳು ಸಾಗಾಟ ನಿಷೇಧಕ್ಕೆ ಒತ್ತಾಯ: ಬಾಲಕಿಯ ಮೃತದೇಹವಿಟ್ಟು ಧರಣಿ
ಈ ಪ್ರದೇಶದಲ್ಲಿ ಮರಳು ಸಾಗಾಟದ ಲಾರಿಗಳ ಓಡಾಟ ವಿಪರೀತವಾಗಿದೆ. ಇಂದು ತುಂಗಭದ್ರ ನದಿಯಿಂದ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಢಿಕ್ಕಿಯಾಗಿಯೇ ಬಾಲಕಿ ದಿವ್ಯಾ ಪಾಟೀಲ್ ಮೃತಪಟ್ಟಿದ್ದಾಳೆ. ಆದ್ದರಿಂದ ಹಗಲು ರಾತ್ರಿಯೆನ್ನದೇ ಈ ಭಾಗದಲ್ಲಿ ನಡೆಯುತ್ತಿರುವ ಮರಳು ಸಾಗಾಟದ ಲಾರಿಗಳ ಸಂಚಾರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬಾಲಕಿಯ ಮೃತದೇಹವಿಟ್ಟು ಧರಣಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News