ಭಾರತೀಯ ಸಂಸ್ಕೃತಿಯು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿದೆಯೇ!!

Update: 2020-03-09 06:57 GMT

ಮಾನ್ಯರೇ,

ನಮ್ಮ ಸಂಸ್ಕೃತಿಯಿಂದ ಬಲು ದೂರ ಸಾಗಿರುವ ಪಾಶ್ಚಾತ್ಯ ಉಡುಗೆ ತೊಡುಗೆಗಳ ಅನುಕರಣೆ ದೇಶವನ್ನು ಆತಂಕಕಾರಿ ಸ್ಥಿತಿಯತ್ತ ಕೊಂಡೊಯ್ದಿದೆ. ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ   ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಮ್ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು. ಹುಡುಗರ, ಯುವಕರ ವೇಷ ಭೂಷಣಗಳು ಸ್ವಲ್ಪಅತಿರೇಕ ಎನಿಸಿದರೂ ಸಹಿಸಿಕೊಳ್ಳುವಂತೆ ಇರುತ್ತದೆ. ಆದರೆ ಆಧುನಿಕ ಯುವತಿಯರ ತುಂಡುಡುಗೆ ಶೈಲಿಯಂತೂ........ ಆ ದೇವರೇ ಯುವ ಜನಾಂಗವನ್ನು ಕಾಪಾಡಬೇಕು. ಇದು ಪಾಶ್ಚಾತ್ಯ ಸಂಸ್ಕೃತಿಯ ಅಪ್ಪಟ ಅನುಕರಣೆಯಾಗಿದೆ. ಈ ಸಂಪ್ರದಾಯಕ್ಕೆ ಕೆಲ ಪೋಷಕರೂ ನೇರ ಸಹಕಾರ ನೀಡುತ್ತಾರೆ. ಇಂದು ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆ, ಸುಲಿಗೆ ಮುಂತಾದವುಗಳಿಗೆ ಈ ಪಾಶ್ಚಾತ್ಯ ಅನುಕರಣೆಗಳು ಕೂಡಾ ಒಂದು ರೀತಿಯಲ್ಲಿ ಕಾರಣವಾಗಿವೆ.

ಪರಿಸ್ಥಿತಿ ಹೀಗಿರುವಾಗ ದೇಶದ ಪ್ರಜ್ಞಾವಂತರಾದ ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ವಿರೋಧಿಸುವ ಮೂಲಕ ನಮ್ಮ ದೇಶ ಪ್ರೇಮವನ್ನು ಜಾಗೃತಗೊಳಿಸಬೇಕಾಗಿದೆ.

- ಮನೋಹರ ಪಿ.ಎಸ್.ಚಿಂತಾಮಣಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News