ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ಪ್ರಧಾನಿ ಮೋದಿ: ರಾಹುಲ್ ಗಾಂಧಿ

Update: 2020-03-11 07:15 GMT

  ಹೊಸದಿಲ್ಲಿ, ಮಾ. 11: ಪ್ರಧಾನಿ ನರೇಂದ್ರ ಮೋದಿ  ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದು ಬಿಟ್ಟು ಅವರಿಗೆ ಹೊರಗೆ ಏನು ನಡೆದರೂ ಗೊತ್ತಾಗುವುದಿಲ್ಲ  ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ  ಆರೋಪಿಸಿದ್ದಾರೆ.

 ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬಗ್ಗೆ  ಈ ಟ್ವೀಟ್ ಮಾಡಿದ್ದಾರೆ.  ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 21 ಶಾಸಕರ ರಾಜೀನಾಮೆಯ ನಂತರ  ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ  ಹಾದಿಯಲ್ಲಿದೆ.

ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ನಾಟಕೀಯ ಘಟನೆಗಳು ಕಾಂಗ್ರೆಸ್-ಜೆಡಿಎಸ್ ಒಕ್ಕೂಟವನ್ನು ಉರುಳಿಸಲು ಕಾರಣವಾಗಿತ್ತು. ಇದೀಗ ಮಧ್ಯಪ್ರದೇಶದಲ್ಲೂ ಅದೇ ರೀತಿಯ ರಾಜಕೀಯ ಬೆಳವಣಿಗೆ ಕಂಡು ಬಂದಿದೆ.  ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಎನ್.ಪಿ.ಪ್ರಜಾಪತಿ  ಅಂಗೀಕರಿಸಿದರೆ , ಮಧ್ಯಪ್ರದೇಶದಲ್ಲಿ  12 ತಿಂಗಳೊಳಗೆ ಬಿಜೆಪಿ ತೆಕ್ಕೆಗೆ ಜಾರಲಿರುವ  ಎರಡನೇ ಕಾಂಗ್ರೆಸ್ ಆಡಳಿತದ ರಾಜ್ಯವಾಗಲಿದೆ ಮಧ್ಯಪ್ರದೇಶ.

ಪ್ರಧಾನಿ ಮೋದಿಯನ್ನುದ್ದೇಶಿಸಿ ಟ್ವೇಟ್ ಮಾಡಿರುವ ರಾಹುಲ್ ಗಾಂಧಿ “ ನೀವು ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ, ಜಾಗತಿಕ ತೈಲ ಬೆಲೆಗಳಲ್ಲಿನ ಶೇ 35ರಷ್ಟು  ಕುಸಿತವನ್ನು ನೀವು ಗಮನಿಸದೇ ಇರಬಹುದು" ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

"ದಯವಿಟ್ಟು  ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 60 ರೂ.ಗೆ ಇಳಿಸುವ ಮೂಲಕ ಭಾರತೀಯರಿಗೆ ಲಾಭವನ್ನು ನೀಡಬಹುದೇ? ಇದರಿಂದ ಸ್ಥಗಿತಗೊಂಡ ಆರ್ಥಿಕತೆಯನ್ನು ಹೆಚ್ಚಿಸಲು ನೆರವಾಗಬಹುದು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News