ಸರಕಾರಕ್ಕೆ 3,354 ಕೋಟಿ ರೂ. ಪಾವತಿಸಿದ ವೊಡಾಫೋನ್

Update: 2020-03-16 14:26 GMT

ಹೊಸದಿಲ್ಲಿ, ಮಾ.16: ವೊಡಾಫೋನ್ ಐಡಿಯ ಸಂಸ್ಥೆ ಸೋಮವಾರ ಸರಕಾರಕ್ಕೆ 3,354 ಕೋಟಿ ರೂ. ಪಾವತಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಸ್ವಯಂ ಮೌಲ್ಯಮಾಪನದ ಆಧಾರದಲ್ಲಿ ಸರಕಾರಕ್ಕೆ ಪಾವತಿಸಲು ಬಾಕಿಯಿದ್ದ ಎಜಿಆರ್ ಮೊತ್ತವನ್ನು ಸಂಪೂರ್ಣ ಪಾವತಿಸಿದಂತಾಗಿದೆ ಎಂದು ಸಂಸ್ಥೆ ಹೇಳಿದೆ.

ಸ್ವಯಂ ಮೌಲ್ಯಮಾಪನದ ಬಳಿಕ ಎಜಿಆರ್ (ಸರಿಹೊಂದಿಸಿದ ಒಟ್ಟು ಆದಾಯ)ದ ಬಾಕಿ ಒಟ್ಟು 6,854 ಕೋಟಿ ರೂ. ಎಂದು ಲೆಕ್ಕಹಾಕಲಾಗಿದ್ದು ಈಗ ಎಲ್ಲಾ ಎಜಿಆರ್ ಬಾಕಿ ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ವೊಡಾಫೋನ್ ಸಂಸ್ಥೆ ಫೆಬ್ರವರಿ 17ರಂದು 2,500 ಕೋಟಿ ರೂ, ಫೆಬ್ರವರಿ 20ರಂದು 1,000 ಕೋಟಿ ರೂ. ಪಾವತಿಸಿತ್ತು. ಆದರೆ ದೂರಸಂಪರ್ಕ ಇಲಾಖೆಯ ಪ್ರಕಾರ ವೊಡಫೋನ್ ಸಂಸ್ಥೆಯಿಂದ ಬರಬೇಕಿರುವ ಒಟ್ಟು ಎಜಿಆರ್ ಮೊತ್ತ 53,000 ಕೋಟಿ ರೂ.(ಬಡ್ಡಿ, ಬಡ್ಡಿಯ ಮೇಲೆ ದಂಡ ಮತ್ತು ಬಾಕಿ ಪಾವತಿ ವಿಳಂಬವಾಗಿದ್ದಕ್ಕೆ ಬಡ್ಡಿ ಸೇರಿ) ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News