ಸಾಗರ: ಮಂಗನ ಕಾಯಿಲೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆ

Update: 2020-03-16 16:34 GMT
ಸಾಂದರ್ಭಿಕ ಚಿತ್ರ

ಸಾಗರ, ಮಾ.16: ತಾಲೂಕಿನ ಅರಲಗೋಡು ಗ್ರಾಪಂ ವ್ಯಾಪ್ತಿಯ ಮಂಡವಳ್ಳಿ ಸಮೀಪದ ಹಾಳತೋಟ ಗ್ರಾಮದ ವಾಸಿ ಕೋಮರಾಜ್ (30) ಶನಿವಾರ ತಡರಾತ್ರಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದು, ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಬಲಿಯಾದವರ ಸಂಖ್ಯೆ 3ಕ್ಕೇರಿದೆ.

ಹಾಲುತೋಟ ವಾಸಿ ಕೋಮರಾಜ್ ಕೆಲವು ದಿನಗಳಿಂದ ಕೆಎಫ್‌ಡಿಯಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸಾ ವೆಚ್ಚ ದುಬಾರಿಯಾಗಿರುವುದು, ಸರಕಾರ ಚಿಕಿತ್ಸಾ ವೆಚ್ಚ ಭರಿಸದೆ ಇರುವುದರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೋಮರಾಜ್ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಪ್ರತಿಭಟನೆ: ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಮಾಡಿದ್ದಾರೆಂದು ಖಂಡಿಸಿ ಕೋಮರಾಜ್ ಅವರ ಶವವನ್ನು ಇರಿಸಿಕೊಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ರವಿವಾರ ಶಾಸಕ ಹಾಲಪ್ಪ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಶವ ಸಂಸ್ಕಾರ ನಡೆಸುವಂತೆ ಮನವಿ ಮಾಡಿದರು. ಮೃತಪಟ್ಟ ಚೌಡಪ್ಪ ಹಾಗೂ ಕೋಮರಾಜ್ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಕಲ್ಪಿಸುವಂತೆ ಅರಲಗೋಡು ಗ್ರಾಮಸ್ಥರು ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News