ರೈಲ್ವೆ ಪ್ಲಾಟ್‌ಫಾರಂ ಟಿಕೆಟ್ ದರ ಐದು ಪಟ್ಟು ಹೆಚ್ಚಳ

Update: 2020-03-19 18:38 GMT

ಹುಬ್ಬಳ್ಳಿ, ಮಾ.19: ಕೊರೋನ ವೈರಸ್ ಹರಡದಂತೆ ತಡೆಯಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ನೈಋತ್ಯ ರೈಲ್ವೆ ಇಲಾಖೆ ಐದು ಪಟ್ಟು ಪ್ಲಾಟ್‌ಫಾರಂ ಟಿಕೆಟ್ ದರವನ್ನು ಹೆಚ್ಚಿಸಿದೆ.

ಕೊರೋನ ವೈರಸ್ ರಾಜ್ಯದಲ್ಲಿ ಭೀತಿಯನ್ನು ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹೊರತು ಪಡಿಸಿ ಹೆಚ್ಚಿನ ಸಂಖ್ಯೆಯ ಜನದಟ್ಟಣೆಯ ನಿಯಂತ್ರಣಕ್ಕಾಗಿ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ದರವನ್ನು 50 ರೂ.ಗೆ ಏರಿಸಲಾಗಿದೆ.

ಈ ಹಿಂದೆ ಓರ್ವರಿಗೆ ಹತ್ತು ರೂಪಾಯಿ ಇದ್ದ ಪ್ಲಾಟ್‌ಫಾರಂ ಟಿಕೆಟ್ ಶುಲ್ಕವನ್ನು ಈಗ ಐದು ಪಟ್ಟು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News