ಹನೂರು: ಅಕ್ರಮ ಪೆಟ್ರೋಲ್ ಮಾರಾಟ ಅಂಗಡಿಗೆ ಬೆಂಕಿ

Update: 2020-03-20 04:07 GMT

ಹನೂರು, ಮಾ.20: ಅಕ್ರಮವಾಗಿ ಪೆಟ್ರೋಲ್, ಡೀಸೆಲ್ ದಾಸ್ತಾನಿರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಗೋಪಿನಾಥಂನ ಪಳನಿ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದೆ.  ಬೆಂಕಿ  ಬಿದ್ದ ಪರಿಣಾಮ ಸಾವಿರಾರು ಬೆಲೆ ಬಾಳುವ ದಿನಸಿ ಪದಾರ್ಥಗಳು ಹಾಗೂ ಮನೆಯ ಛಾವಣಿ ಬೆಂಕಿಯಿಂದ ಸುಟ್ಟು ಭಸ್ಮವಾಗಿವೆ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಿದರು.

ಪಳನಿ ತನ್ನ ಚಿಲ್ಲರೆ ಅಂಗಡಿಯಲ್ಲಿ ಡೀಸೆಲ್, ಪೆಟ್ರೋಲ್ ಶೇಖರಣೆ ಮಾಡಿ ಹಲವು ವರ್ಷಗಳಿಂದ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News