ಕತ್ತೆಬೆನ್ನೂರು: ಟ್ರಾಕ್ಟರ್ ಮಗುಚಿಬಿದ್ದು ನಾಲ್ವರು ಮೃತ್ಯು

Update: 2020-03-20 09:12 GMT

ಬಳ್ಳಾರಿ, ಮಾ.20: ಮದುವೆ ದಿಬ್ಬಣದ ಟ್ರಾಕ್ಟರ್ ಮಗುಚಿ ಬಿದ್ದ ಪರಿಣಾಮ ಟ್ರಾಕ್ಟರ್ ನಲ್ಲಿದ್ದವರಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿ ಮೃತಪಟ್ಟು, ಏಳು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಹಿರೇಹಡಗಲಿ ಪೊಲೀಸ್ ಠಾಣೆವ್ಯಾಪ್ತಿಯ ಕತ್ತೆಬೆನ್ನೂರು ಗ್ರಾಮದ ಬಳಿ ಗುರುವಾರ ಜರುಗಿದೆ.

ಮೃತಪಟ್ಟವರನ್ನು ದಾಸಹನಹಳ್ಳಿ ಮೂಲದ ಅಂಗಡಿ ಗೀತಾ(40) ಸೊಪ್ಪನ ಸುನೀತಾ(30) ವೀರಣ್ಣ ಜಕ್ಕಣ್ಣನವರ(35) ಹೆಗ್ಗಜ್ಜರ ಕಾಳಮ್ಮ(50) ಗುರುತಿಸಲಾಗಿದೆ.

ಭೀರಬ್ಬಿಯಲ್ಲಿದ್ದ ತಮ್ಮ ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ ದಾಸಹನಹಳ್ಳಿಗೆ ಹಿಂದಿರುಗುತ್ತಿದ್ದ ವೇಳೆ ಕತ್ತೇಬೆನ್ನೂರು ಬಳಿ ಟ್ರಾಕ್ಟರ್ ಆಯತಪ್ಪಿ ಮಗುಚಿಬಿದ್ದು ಅಪಘಾತ ಸಂಭವಿಸಿದೆ.

 ಈ ಬಗ್ಗೆಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News