ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-03-20 18:28 GMT

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಸಿಡ್ನಿ ಸ್ಕಾಲರ್ಸ್ ಇಂಡಿಯಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2020

ವಿವರ: ಆಸ್ಟ್ರೇಲಿಯದ ಸಿಡ್ನಿ ವಿವಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಂದ ಸಿಡ್ನಿ ವಿವಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ.

ಅರ್ಹತೆ: ಈಗ ಭಾರತದಲ್ಲಿ ವಾಸಿಸುತ್ತಿರುವ ಭಾರತದ ನಿವಾಸಿಯಾಗಿರಬೇಕು. ಪದವಿ ಮತ್ತು ಸ್ನಾತಕೋತ್ತರ ಪದವಿೆ ಅರ್ಜಿ ಸಲ್ಲಿಸಿರುವವರು ಅರ್ಹರು.

ನೆರವು:  ಆಯ್ಕೆಯಾದ ಅಭ್ಯರ್ಥಿಗಳಿಗೆ ಒಟ್ಟು 50,000 ಆಸ್ಟ್ರೇಲಿಯನ್ ಡಾಲರ್ ಮೊತ್ತದ 28 ಸ್ಕಾಲರ್‌ಶಿಪ್ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/SSI1

*********

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಸಿಎಸ್‌ಎಂ ಟ್ರಸ್ಟ್ ಅಂಡರ್‌ಗ್ರಾಜುವೇಟ್ ಮೈನಿಂಗ್ ಸ್ಕಾಲರ್‌ಶಿಪ್ 2020

ವಿವರ: ಎಕ್ಸೆಟರ್ ವಿವಿಯಲ್ಲಿ ಪದವಿ ಅಧ್ಯಯನ ಮುಂದುವರಿಸಬಯಸುವ ವಿದ್ಯಾರ್ಥಿಗಳಿಗೆ ಬ್ರಿಟನ್‌ನ ಕ್ಯಾಂಬೋರ್ನ್ ಸ್ಕೂಲ್ ಆಫ್ ಮೈನ್ಸ್ ಟ್ರಸ್ಟ್ ನೀಡುವ ಸ್ಕಾಲರ್‌ಶಿಪ್ ಇದಾಗಿದೆ. ಪ್ರಥಮ ವರ್ಷದ ಮೈನಿಂಗ್(ಗಣಿಗಾರಿಕೆ) ಪದವಿ ವಿದ್ಯಾರ್ಥಿಗಳಿಗೆ ಆರ್ಥಿ ನೆರವು ಒದಗಿಸುವ ಉದ್ದೇಶವಿದೆ.

ಅರ್ಹತೆ: ಎಕ್ಸೆಟರ್ ವಿವಿಯಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಅಥವಾ ಮಾಸ್ಟರ್ ಆಫ್ ಇಂಜಿನಿಯರಿಂಗ್ ಪದವಿ ಕಲಿಯಲು ಆಹ್ವಾನ ಪಡೆದ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು:  ಆಯ್ಕೆಯಾದ 25 ವಿದ್ಯಾರ್ಥಿಗಳಿಗೆ ಒಟ್ಟು 6,000 ಗ್ರೇಟ್‌ಬ್ರಿಟನ್ ಪೌಂಡ್ ಮೊತ್ತವನ್ನು 3 ಅವಧಿಯ ಕಂತಿನಲ್ಲಿ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/CTU1

****************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ರಾಯಲ್ ಹಾಲೋವೇ ಯುನಿವರ್ಸಿಟಿ ಆಫ್ ಲಂಡನ್ -ಇಂಟರ್‌ನ್ಯಾಷನಲ್ ಫ್ಯೂಚರ್ ಲೀಡರ್ಸ್ ಸ್ಕಾಲರ್‌ಶಿಪ್ 2020

ವಿವರ: ಲಂಡನ್‌ನ ರಾಯಲ್ ಹಾಲೋವೇ ವಿವಿಯಲ್ಲಿ ಅಂತರ್‌ರಾಷ್ಟ್ರೀಯ ಪದವಿ ಅಧ್ಯಯನ ನಡೆಸಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಥಿಕರ್ ನೆರವು ಒದಗಿಸಲಾಗುವುದು.

ಅರ್ಹತೆ: ಲಂಡನ್‌ನ ರಾಯಲ್ ಹಾಲೋವೇ ಯುನಿವರ್ಸಿಟಿಯಲ್ಲಿ ಪದವಿ ಅಧ್ಯಯನ ಆರಂಭಿಸಿರುವ 12ನೇ ತರಗತಿ ತೇರ್ಗಡೆಯಾಗಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು:  ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಅಧ್ಯಯನಕ್ಕೆ ಸಂಬಂಧಿಸಿದ ಶುಲ್ಕದಲ್ಲಿ 4,000 ಗ್ರೇಟ್‌ಬ್ರಿಟನ್ ಪೌಂಡ್‌ನಷ್ಟು ಕಡಿತ ಮಾಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 26, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/RHF1

*************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ದಿ ಫೋರ್ಟಿಸ್ ಸೊಸೈಟಿ 2020

ವಿವರ: ವಿಶ್ವಾದ್ಯಂತದ ವಿದ್ಯಾರ್ಥಿಗಳಿಂದ ನ್ಯೂಯಾರ್ಕ್ ನ ದಿ ಫೋರ್ಟಿಸ್ ಸೊಸೈಟಿ ಫೆಲೊಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ದಿ ಫೋರ್ಟಿಸ್ ಸೊಸೈಟಿಯ ವೌಲ್ಯಗಳನ್ನು ಸಾಕಾರಗೊಳಿಸುವ, ದ್ವಿತೀಯ ಪದವಿಯಲ್ಲಿ ಉತ್ತಮ ಸಾಧನೆಯೊಂದಿಗೆ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಹರು. ವಿದ್ಯಾರ್ಥಿಗಳನ್ನು ಶಿಕ್ಷಣದ ಸಂದರ್ಭ ಪ್ರೋತ್ಸಾಹಿಸಿ ಅವರಿಗೆ ಫೋರ್ಟಿಸ್ ಸೊಸೈಟಿಗೆ ಪ್ರವೇಶ ದೊರಕಿಸಿಕೊಡುವ ಉದ್ದೇಶವಿದೆ.

ಅರ್ಹತೆ: ಅತ್ಯುತ್ತಮ ಶೈಕ್ಷಣಿಕ ಸಾಧನೆ ತೋರಿರುವ ದ್ವಿತೀಯ ಪದವಿ ಕಲಿಯುತ್ತಿರುವ ಭಾರತದ ವಿದ್ಯಾರ್ಥಿಗಳು ಅರ್ಹರು. 22 ವರ್ಷ ಅಥವಾ ಅದಕ್ಕಿಂ ಕಡಿಮೆ ವಯಸ್ಸಿನವರಾಗಿರಬೇಕು.

ನೆರವು:  ಆಯ್ಕೆಯಾದ ಅಭ್ಯರ್ಥಿಗಳಿಗೆ 3 ವರ್ಷದ ಅವಧಿಗೆ ಅತ್ಯುನ್ನತ ಮಟ್ಟದ ವೃತ್ತಿಪರರಿಂದ ಮಾರ್ಗದರ್ಶನ, ವೈಯಕ್ತಿಕ ಇಂಟರ್ನ್‌ಶಿಪ್, ವೃತ್ತಿ ಸಲಹೆ, ನಾಯಕತ್ವ ತರಬೇತಿ ಕಾರ್ಯಾಗಾರ, ಮತ್ತು ವಿಶ್ವದಾದ್ಯಂತದ ಅಸಾಧಾರಣ ವಿದ್ಯಾರ್ಥಿ ನಾಯಕರ ಜಾಲಬಂಧಕ್ಕೆ ಪ್ರವೇಶದ ಅವಕಾಶವಿರುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 26, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/FST1

****************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

 ರಾಯಲ್ ಸೊಸೈಟಿ ನ್ಯೂಟನ್ ಇಂಟರ್‌ನ್ಯಾಷನಲ್ ಫೆಲೊಶಿಪ್ಸ್ 2020, ಯುಕೆ

ವಿವರ:  ವಿಶ್ವದಾದ್ಯಂತದ, ಆರಂಭದ ಹಂತದಲ್ಲಿರುವ ಪೋಸ್ಟ್‌ಡಾಕ್ಟೋರಲ್ ಸಂಶೋಧಕರಿಂದ ಬ್ರಿಟನ್‌ನ ಸಂಶೋಧನಾ ಸಂಸ್ಥೆಯಲ್ಲಿ 2 ವರ್ಷ ಕಾರ್ಯ ನಿರ್ವಹಿಸಲು ದಿ ರಾಯಲ್ ಸೊಸೈಟಿ, ಬ್ರಿಟಿಷ್ ಅಕಾಡಮಿ ಮತ್ತು ಅಕಾಡಮಿ ಆಫ್ ಮೆಡಿಕಲ್ ಸೈಯನ್ಸಸ್ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅನುದಾನ ಹಾಗೂ ಇತರ ಆರ್ಥಿಕ ನೆರವು ಒದಗಿಸಲಾಗುವುದು.

ಅರ್ಹತೆ: ಪಿಎಚ್‌ಡಿ ಪದವಿ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು, ಅರ್ಜಿ ಸಲ್ಲಿಸುವಾಗ 7 ವರ್ಷಕ್ಕಿಂತ ಕಡಿಮೆ ಸಕ್ರಿಯ ಪೂರ್ಣಾವಧಿಯ ಪೋಸ್ಟ್‌ಡಾಕ್ಟೋರಲ್ ಅನು  ವ ಹೊಂದಿರುವವರು ಅರ್ಹರು.

ನೆರವು:  ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 24,000 ಗ್ರೇಟ್‌ಬ್ರಿಟನ್ ಪೌಂಡ್ ನೆರವು, ಸಂಶೋಧನಾ ವೆಚ್ಚ, ಪುನರ್ವಾಸ ವೆಚ್ಚ ಹಾಗೂ ಇತರ ಸೌಲಭ್ಯ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 26, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/RSN3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News