ದಿಲ್ಲಿಯ 72 ಲಕ್ಷ ಜನರಿಗೆ ಪಡಿತರ, ಪಿಂಚಣಿ ದ್ವಿಗುಣ, ರಾತ್ರಿ ಉಚಿತ ಊಟ: ಕೇಜ್ರಿವಾಲ್

Update: 2020-03-21 11:12 GMT

ಹೊಸದಿಲ್ಲಿ: ರಾಜಧಾನಿಯಲ್ಲಿ 5 ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ ಮತ್ತು ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೊರೊನಾವೈರಸ್ ನಿಂದ ದಿನಗೂಲಿ ಕಾರ್ಮಿಕರು ತಮ್ಮ ದುಡಿಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ದಿಲ್ಲಿ ಸರಕಾರದ ಪಡಿತರ ಯೋಜನೆಯನ್ನು ಅವಲಂಬಿಸಿದ 72 ಲಕ್ಷ ಜನರಿಗೆ ಉಚಿತ ಪಡಿತರ ನೀಡಲಾಗುವುದು. ಪ್ರತಿಯೊಬ್ಬರಿಗೂ 5 ಕೆ.ಜಿ. ಪಡಿತರ ಬದಲು 7.5 ಕೆಜಿ ಪಡಿತರ ನೀಡಲಾಗುವುದು" ಎಂದವರು ಹೇಳಿದರು.

ಇದೇ ಸಂದರ್ಭ ವಿಧವೆಯರ, ವೃದ್ಧರ ಮತ್ತು ದಿವ್ಯಾಂಗರ ಪಿಂಚಣಿಯನ್ನು ದ್ವಿಗುಣಗೊಳಿಸಲಿದ್ದೇವೆ. ಉಚಿತವಾಗಿ ರಾತ್ರಿ ಸಮಯ ಆಹಾರ ವಿತರಿಸಲಿದ್ದೇವೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News