ಕ್ವಾರಂಟೈನ್ ಉಲ್ಲಂಘಿಸಿದವರಿಗೆ ನೋಟಿಸ್: ಗೃಹ ಸಚಿವ ಬೊಮ್ಮಾಯಿ

Update: 2020-03-23 14:13 GMT

ಬೆಂಗಳೂರು, ಮಾ.23: ರಾಜ್ಯದಲಿ ಕೆಲವರು ಕ್ವಾರಂಟೈನ್ ಉಲ್ಲಂಘಿಸುತ್ತಿರುವ ಪ್ರಕರಣಗಳು ವರದಿಯಾಗಿದ್ದು, ಅಂತಹವರಿಗೆ ನೊಟೀಸ್ ನೀಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ವಾರಂಟೈನ್‌ಗೆ ಒಳಗಾದವರನ್ನು ಸಂಪೂರ್ಣವಾಗಿ ಗುರುತಿಸುವ ಕೆಲಸ ಮುಂದುವರಿದಿದೆ. ಉಲ್ಲಂಘಿಸುವವರಿಗೆ ನೋಟಿಸ್ ನೀಡಲಾಗುವುದು. ಕ್ವಾರಂಟೈನ್ ಎಲ್ಲಿಂದ ಎಲ್ಲಿಯವರೆಗೆ ಇರುತ್ತದೆ ಎಂದು ನೋಟಿಸ್‌ನಲ್ಲಿ ಇರುತ್ತದೆ. 9 ಜಿಲ್ಲೆಗಳಲ್ಲಿ ಸೆಕ್ಷನ್ ಮುಂದುವರಿಯಲಿದೆ ಎಂದು ಹೇಳಿದರು.

ಖಾಸಗಿ ಬಸ್, ಟ್ಯಾಕ್ಸಿಗಳ ಓಡಾಟ ನಿಷೇಧಿಸುವುದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. 9 ಜಿಲ್ಲೆಗಳಲ್ಲಿ ವಾಣಿಜ್ಯ ವ್ಯವಹಾರ ಇರುವುದಿಲ್ಲ. ನಿತ್ಯದ ಅವಶ್ಯಕತೆಗಳ ಮಾರಾಟಕ್ಕೆ ಅಷ್ಟೇ ಅವಕಾಶ ಎಂದು ಸಚಿವರು ಹೇಳಿದರು.

ಕೈದಿಗಳು ಜೈಲಿನ ಒಳಗೆ ಕ್ವಾರಂಟೈನ್‌ಗೆ ಒಳಗಾಗುತ್ತಿದ್ದಾರೆ. ಹೊಸ ಕೈದಿಗಳಿಗೆ ಪೂರ್ತಿ ಪ್ರಮಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕೈದಿಗಳು ನಿತ್ಯ 5 ಸಾವಿರ ಮಾಸ್ಕ್ ತಯಾರಿಸುತ್ತಿದ್ದಾರೆ. ಈಗಾಗಲೇ 17 ಸಾವಿರ ಮಾಸ್ಕ್ ನೀಡಿದ್ದಾರೆ. ಇನ್ನು ಒಂದು ವಾರ ಇಲಾಖೆಗೆ ಅಗತ್ಯವಿರುವ ಮಾಸ್ಕ್ ತಯಾರು ಮಾಡಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News