ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಮೋದಿ

Update: 2020-03-24 06:13 GMT

ಹೊಸದಿಲ್ಲಿ, ಮಾ.24: ಕೋವಿಡ್ -19 ರ ಭೀತಿಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಇಂದು  ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹಿಂದಿನ ಭಾಷಣದಲ್ಲಿ, ಅವರು ರವಿವಾರ  ಜನತಾ ಕರ್ಫ್ಯೂ ಘೋಷಿಸಿ  ಕರೋನವೈರಸ್ ವಿರುದ್ಧ ಹೋರಾಡಲು  ಪ್ರಧಾನಿ ಕರೆ ನೀಡಿದ್ದರು. ಸುಮಾರು 30 ನಿಮಿಷಗಳ ರಾಷ್ಟ್ರೀಯ ಪ್ರಸಾರದಲ್ಲಿ, ಕೊರೋನ ವೈರಸ್ ನ  ಅಪಾಯಗಳನ್ನು ಒತ್ತಿಹೇಳಿದ್ದರು. ಜನರು  ಮನೆಯೊಳಗೇ ಇರಲು ಮಾಡಲು ಪಿಎಂ ಮೋದಿ ಜನರನ್ನು ವಿನಂತಿಸಿದ್ದರು, 

ವೈದ್ಯಕೀಯ ವೃತ್ತಿಪರರು, ನೈರ್ಮಲ್ಯ ಸಿಬ್ಬಂದಿ, ವಿಮಾನಯಾನ ಸಿಬ್ಬಂದಿ, ವಿತರಣಾ ವ್ಯಕ್ತಿಗಳು ಮತ್ತು ಮಾಧ್ಯಮ ಸಿಬ್ಬಂದಿಗಳ ಶ್ರಮವನ್ನು ಶ್ಲಾಘಿಸಿದ ಪಿಎಂ ಮೋದಿ, ರವಿವಾರ ಸಂಜೆ 5 ಗಂಟೆಗೆ ಕೈ ಚಪ್ಪಾಳೆ ತಟ್ಟಿ ಐದು ನಿಮಿಷಗಳ ಕಾಲ ನಿಂತು ಗೌರವ ಸಲ್ಲಿಸುವ ಮೂಲಕ ಜನರಿಗೆ ಕೃತಜ್ಞತೆ ಸಲ್ಲಿಸುವಂತೆ ಕೋರಿದ್ದರು. 

ಕಳೆದ ವಾರ, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಜಂಟಿ ಕಾರ್ಯತಂತ್ರವನ್ನು ಸಿದ್ಧಪಡಿಸಲು ಅವರು ಸಾರ್ಕ್ ನಾಯಕರ ವೀಡಿಯೊ ಸಮ್ಮೇಳನದಲ್ಲಿ ಭಾಗವಹಿಸಿದರು.

ದೇಶದಲ್ಲಿ ಮಂಗಳವಾರ ಒಟ್ಟು ಕೊರೋನ ವೈರಸ್ ಪ್ರಕರಣಗಳು 500 ದಾಟಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News