ಅನಗತ್ಯವಾಗಿ ಬೀದಿಗಿಳಿದರೆ ಕ್ರಿಮಿನಲ್ ಪ್ರಕರಣ ದಾಖಲು: ಬೆಳಗಾವಿ ಪೊಲೀಸ್ ಆಯುಕ್ತ ಬಿ.ಲೋಕೇಶ್

Update: 2020-03-27 17:11 GMT

ಬೆಳಗಾವಿ, ಮಾ. 27: ನಗರವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು, ನಗರದಲ್ಲಿ ಇನ್ನು ಮುಂದೆ ಅನಗತ್ಯವಾಗಿ ತಿರುಗಾಡುವ ಕಿಡಿಗೇಡಿಗಳ ವಾಹನಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ಲೋಕೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆ ಕಚೇರಿಯಲ್ಲಿ ನಡೆದ ಜಿಲ್ಲಾಡಳಿತದ ಸಭೆಯ ಬಳಿಕ ಮಾತನಾಡಿದ ಅವರು, ನಗರ ನಿವಾಸಿಗಳು ಯಾರೂ ಮನೆಯಿಂದ ಹೊರಗೆ ಬರಬೇಡಿ, ಯಾರ ಮೇಲೂ ಬಲ ಪ್ರಯೋಗ ಮಾಡುವ ಇಚ್ಛೆ ನಮಗಿಲ್ಲ ಎಂದರು.

ಎಲ್ಲ ಬಡಾವಣೆಗಳಲ್ಲಿ, ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ಮುಟ್ಟಿಸುವ ವ್ಯವಸ್ಥೆ ಮಾಡಿದ್ದೇವೆ. ವಾಹನಗಳಲ್ಲಿ ಮೈಕ್ ಹಚ್ಚಿಕೊಂಡು ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಮುಟ್ಟಿಸುತ್ತೇವೆ. ದಯವಿಟ್ಟು ಯಾರೊಬ್ಬರೂ ಮನೆಯಿಂದ ಹೊರಗೆ ಬರಬೇಡಿ. ಪೊಲೀಸರಿಗೆ ಸಹಕಾರ ಕೊಡಿ ಎಂದು ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News