ಪರಿಹಾರದ ಅಸಲಿಯತ್ತು

Update: 2020-03-27 17:33 GMT

ವಿತ್ತ ಸಚಿವರು ಕೊನೆಗೂ ಕೊರೋನ ಪೀಡಿತರಿಗಾಗಿ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಇದು ಜನರಿಗೆ ಎಷ್ಟರ ಮಟ್ಟಿಗೆ ನೆರವಾಗಲಿದೆ?

1. 1.7 ಲಕ್ಷ ಕೋಟಿ ರೂ. ಅಂದರೆ ಕೇಂದ್ರ ಸರಕಾರದ ಆದಾಯದ ಶೇ.10. ಇದು ಯಾವ ಮೂಲಗಳಿಂದ ನೀಡಲಾಗಿದೆ?

2. ಮಿನರಲ್ ಫಂಡ್ ಅಂದರೇನು? ಅದು ಕೇಂದ್ರದ್ದಾ ರಾಜ್ಯದ್ದಾ?

3. ಪ್ರಾವಿಡೆಂಟ್ ಫಂಡ್ ಮತ್ತು ಕಟ್ಟಡ ಕಾರ್ಮಿಕರ ಫಂಡ್ ಆಯಾ ಕಾರ್ಮಿಕರಿಗೆ ಸೇರಿದ್ದು. ಮೋದಿ ಕೊಡೋದು ಹೇಗೆ?

4. ಉದ್ಯೋಗ ಖಾತರಿ ಕೂಲಿ ಹೆಚ್ಚಳ 2020-21 ಸಾಲಿಗೆ ಮಾಮೂಲಿ ಹೆಚ್ಚಳ. ಅದೂ PEA NUT ಎಷ್ಟೋ ರಾಜ್ಯಗಳು ಈಗಾಗಲೇ ಹೆಚ್ಚು ಕೂಲಿ ನೀಡುತ್ತಿವೆ. ಉದ್ಯೋಗ ಖಾತರಿಯಲ್ಲಿ ಹೆಚ್ಚುವರಿ ದಿನವನ್ನು ಮಂಜೂರು ಮಾಡಿಲ್ಲ.

5. ಕರೋನ ಹೋರಾಟದ ಯೋಧರಿಗೆ ವಿಮೆ ಸ್ವಾಗತಾರ್ಹ. ಆದರೆ 50 ಸಾವಿರ ಕೋಟಿ ರೂ. ವಿಮಾ ಮೊತ್ತದ ಪ್ರೀಮಿಯಂ ಮಾತ್ರ ಸರಕಾರ ಕಟ್ಟುತ್ತದೆ. ಯಾವುದೇ ವಿಮೆಯಲ್ಲಿ ಅಷ್ಟೂಜನ ಸಾಯುವುದಿಲ್ಲ. ಪ್ರೀಮಿಯಂಗಿಂತ ಪರಿಹಾರ ಎಂದೂ ಕಮ್ಮಿಯೇ.

6. ಪಡಿತರ ಹೆಚ್ಚುವರಿ ಮಾತ್ರ ಓಕೆ. ಆದರೆ ಮಳೆಗಾಲ ಕಳೆದು ಈ ಹಿಂದಿನಂತೆ ಮೋದಿ ಇದನ್ನು ವಾರ್ಷಿಕ ಬಟವಾಡೆಯ ಭಾಗ ಎಂದು ಕೈಯೆತ್ತಿದರೆ ಆಶ್ಚರ್ಯಪಡಬೇಡಿ.

ಈ ಕೊರೋನ ನೆಪದಲ್ಲಿ ಮೋದಿ ತನ್ನ ರಾಜಕೀಯ ಪ್ರೀತಿ-ನೀತಿಗನುಗುಣವಾಗಿ ಕೆಲವು ದಿನ ಕಳೆದ ಬಳಿಕ ಕಾರ್ಪೊರೇಟ್ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ರಿಯಾಯಿತಿ ಘೋಷಿಸಬಹುದು.
 

Writer - ಸುರೇಶ ಕಂಜರ್ಪಣೆ

contributor

Editor - ಸುರೇಶ ಕಂಜರ್ಪಣೆ

contributor

Similar News