ಕಲಬುರಗಿ ಜಿಲ್ಲಾದ್ಯಂತ ಪೆಟ್ರೋಲ್ ಬಂಕ್‌ ಬಂದ್ ಇಲ್ಲ: ಆದೇಶ ಬದಲಾಯಿಸಿದ ಜಿಲ್ಲಾಧಿಕಾರಿ

Update: 2020-03-28 04:08 GMT

ಕಲಬುರಗಿ, ಮಾ.28: ಪೆಟ್ರೋಲ್ ಬಂಕ್ ನಲ್ಲಿ ಆರೋಗ್ಯ ಸಿಬ್ಬಂದಿಗೆ ಮೊದಲ ಅದ್ಯತೆ ನೀಡಬೇಕು. ತದನಂತರ ಅಗತ್ಯ ಸೇವೆಗಳ ಪೂರೈಸುವವರಿಗೆ ಕೊನೆಯದಾಗಿ ಇಂಧನ ಲಭ್ಯತೆ ಆಧಾರದ ಮೇಲೆ ಸಾರ್ವಜನಿಕರಿಗೆ ಇಂಧನ ಪೂರೈಸುವಂತೆ ಬಂಕ್ ಮಾಲಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿಕೆ.

ಕಲಬುರಗಿ ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕೊರತೆ ಇಲ್ಲ. ಅನಾವಶ್ಯಕ ಗೊಂದಲಕ್ಕೆ ಒಳಗಾಗಿ ವಸ್ತುಗಳು ಶೇಖರಿಸಬಾರದು. ಅಲ್ಲದೇ ಹೆಚ್ಚಿನ ದರಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ನಗರದ ಕಣ್ಣಿ ತರಕಾರಿ ಮಾರ್ಕೆಟ್ ಅಟಲ್ ಬಿಹಾರಿ ವಾಜಪೇಯಿ ಆಶ್ರಯ ಬಡಾವಣೆಗೆ ತಾತ್ಕಾಲಿಕ ಸ್ಥಳಾಂತರ ಮಾಡಲಾಗಿದ್ದು, ಅಲ್ಲಿಂದ ಖರೀದಿಸಬಹುದಾಗಿದೆ. ಪ್ರತಿ ವಾರ್ಡಗಳಿಗೂ ಅಗತ್ಯ ವಸ್ತುಗಳ ಪೂರೈಕೆಗೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಗತ್ಯಗೆ ತಕ್ಕಂತೆ ಮನೆಯಿಂದ ಒಬ್ಬರು ಹೊರಗಡೆ ಬಂದು ಖರೀದಿಸಬಹುದಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಲಾಕ್ ಡೌನ್ ಘೋಷಿದ್ದು, ಜಿಲ್ಲಾದ್ಯಂತ ಕಲಂ 144 ಜಾರಿ ಇದ್ದರೂ ಸಹ ಜನರು ಸಾಮಾನ್ಯವಾಗಿ ಹೊರಗಡೆ ಓಡಾಡುತ್ತಿದ್ದು, ಕಾನೂನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ವರದಿಯಾಗುತಿದೆ. ಅನಾವಶ್ಯಕ ಹೊರಗಡೆ ಬಂದರೆ ಕಠಿಣ ಕ್ರಮ ಕೈಗೊಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೋಂ ಐಸೋಲೇಷನ್ ನಲ್ಲಿ ಇದ್ದವರು ಹೊರಗಡೆ ಓಡಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ತಕ್ಷಣ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ ಡಿಸಿ, ಪ್ರತಿಯೊಬ್ಬರು ಸಹ ಸಾಮಾಜಿಕ ಅಂತರ ಕಾಯ್ದುಕೊಳಬೇಕೆಂದು ಮನವಿ ಮಾಡಿದ್ದಾರೆ.

ಅದೇ ರೀತಿ ಬಾಡಿಗೆ ಮನೆಯಲ್ಲಿರುವ ವೈದ್ಯರು ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮನೆ ಖಾಲಿ ಮಾಡಲು ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂಥಹ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮನೆ ಮಾಲಕರನ್ನು ಸಮಸ್ಯೆ ಮುಗಿಯುವವರೆಗೆ ಬೆರೆಡೆಗೆ ಸ್ಥಳಾಂತರಿಸಿ ಇರಿಸಲಾಗುವುದೆಂದು ತಿಳಿಸಿದರು.

ಸಾಲ ಪಡೆದವರಿಗೆ ಈ ವೇಳೆಯಲ್ಲಿ ಸಾಲ ವಸೂಲಾತಿ ಯಾವುದೇ ರೀತಿಯ ಹಿಂಸೆ ಮತ್ತು ನೋಟಿಸ್ ನೀಡಬಾರದು, ವಿಶೇಷವಾಗಿ ಫೈನಾನ್ಸ್ ಸಂಸ್ಥೆಗಳು ಸಮಸ್ಯೆ ಮುಗಿಯುವವರೆಗೆ ಯಾವುದೇ ರೀತಿಯ ಸಾಲವನ್ನು ಪಾವತಿ ಮಾಡಬಾರದೆಂದು ಜಿಲ್ಲಾಧಿಕಾರಿ ಶರತ್ ಬಿ. ಈ ವೇಳೆಯಲ್ಲಿ ಮಾತನಾಡಿ ಆದೇಶಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News