ಕೊರೋನ ಲಾಕ್ ಡೌನ್: ಸಾಲ ವಸೂಲಾತಿ ಮಾಡದಂತೆ ಬ್ಯಾಂಕ್‍ ಗಳಿಗೆ ಹೈಕೋರ್ಟ್ ಆದೇಶ

Update: 2020-03-28 15:01 GMT

ಬೆಂಗಳೂರು, ಮಾ.3: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಸರಕಾರಗಳು ಜನತೆಯ ಮೇಲೆ ವಿಧಿಸಿರುವ ಲಾಕ್ ಡೌನ್ ತೆರವು ಮಾಡುವವರಿಗೆ ಬ್ಯಾಂಕ್‍ಗಳು ಯಾವುದೇ ರೀತಿಯ ಸಾಲ ವಸೂಲಾತಿ ಮಾಡಬಾರದು ಎಂದು ಹೈಕೋರ್ಟ್ ರಾಜ್ಯದ ಎಲ್ಲ ಬ್ಯಾಂಕ್‍ಗಳಿಗೂ ಆದೇಶ ನೀಡಿದೆ. 

ಸಾಲ ವಸೂಲಾತಿ ಮಂಡಳಿ(ಡಿಆರ್‍ಟಿ) ವ್ಯಕ್ತಿಯೊಬ್ಬರ ಸಾಲ ವಸೂಲಿ ಮಾಡಲಿಕ್ಕೆ ಬ್ಯಾಂಕ್ ಪರವಾಗಿ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿರುವ ಹೈಕೋರ್ಟ್ ಈ ಆದೇಶ ನೀಡಿದೆ. 

ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ತಮ್ಮ ಆಸ್ತಿ ಹರಾಜು ಹಾಕಲು ಮುಂದಾಗಿರುವ ಕ್ರಮಕ್ಕೆ ಮತ್ತು ಡಿಆರ್‍ಟಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾ.ಜಿ.ನರೇಂದರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. 

ಬ್ಯಾಂಕ್‍ಗಳು ಸಾಲ ವಸೂಲಿ ಮಾಡಿದ್ದೇ ಆದರೆ ಅಂತಹ ಬ್ಯಾಂಕುಗಳ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಿದೆ. ಆದೇಶದ ಪ್ರತಿಯನ್ನು ಗೃಹ ಇಲಾಖೆ, ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಲುಪಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಗೆ ಸೂಚನೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News