ಕೊಪ್ಪ ಹೆಲ್ಪ್ ಲೈನ್ ನಿಂದ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ವಿತರಣೆ

Update: 2020-04-02 09:15 GMT

ಕೊಪ್ಪ, ಎ.2: ದೇಶಾದ್ಯಂತ ಕೊರೋನ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ, ನಿರ್ಗತಿಕ ಕುಟುಂಬಗಳಿಗೆ ‘ಕೊಪ್ಪ ಹೆಲ್ಪ್ ಲೈನ್’ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ನೆರವಾಗುತ್ತಿದೆ.

ಕೊಪ್ಪದ ಕೆಲವು ಯುವಕರು ‘ಕೊಪ್ಪ ಹೆಲ್ಪ್ ಲೈನ್’ ಮೂಲಕ ಒಂದುಗೂಡಿ ದಾನಿಗಳ ನೆರವಿನೊಂದಿಗೆ ಈ ಸಹಾಯಹಸ್ತ ಚಾಚುವ ಕಾರ್ಯ ಮಾಡುತ್ತಿದ್ದು, ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬಗಳಲ್ಲಿ ಬಡ, ಅನಾಥ ಕುಟುಂಬಗಳನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಈಗಾಗಲೇ ಇಂತಹ 58 ತೀರಾ ಬಡ ಕುಟುಂಬಗಳನ್ನು ಗುರುತಿಸಿ ಸಹಾಯ ಮಾಡಲಾಗಿದೆ. ಜೊತೆಗೆ ಎರಡು ವಾಹನಗಳನ್ನು ತುರ್ತು ಸೇವೆಗಾಗಿ ಮತ್ತು ತುರ್ತು ಅಗತ್ಯಬಿದ್ದವರಿಗೆ ರಕ್ತದಾನ ಮಾಡಲು ಕೂಡ ನಿರ್ಧರಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News