ಮುಂಬೈ ಧಾರಾವಿಯ 35 ವಯಸ್ಸಿನ ವೈದ್ಯರಿಗೆ ಕೋವಿಡ್-19 ಸೋಂಕು

Update: 2020-04-03 06:03 GMT

 ಮುಂಬೈ, ಎ.3: ಮುಂಬೈನ ಧಾರಾವಿಯ 35 ವಯಸ್ಸಿನ ವೈದ್ಯರಿಗೂ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ವೈದ್ಯರನ್ನು ಸಂಪರ್ಕಿಸಿರುವ ಎಲ್ಲರನ್ನು ಪತ್ತೆ ಹಚ್ಚಿ ಪ್ರತ್ಯೇಕವಾಗಿಡುವ ಪ್ರಕ್ರಿಯೆ ಆರಂಭಿಸಲಾಗಿದೆ.

 ವೈದ್ಯರ ಕುಟುಂಬವನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇಂದು ಅವರ ಸೋಂಕಿನ ಪರೀಕ್ಷೆ ನಡೆಸಲಾಗುವುದು. ವೈದ್ಯರ ಕುಟುಂಬ ನೆಲೆಸಿದ್ದ ಕಟ್ಟಡಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು ಬೀಗ ಮುದ್ರೆ ಹಾಕಿದ್ದಾರೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ತಿಳಿಸಿದೆ.

ಏಶ್ಯದ ಅತ್ಯಂತ ದೊಡ್ಡ ಕೊಳಗೇರಿ ಪ್ರದೇಶವಾಗಿರುವ ಧಾರಾವಿಯಲ್ಲಿ ಮೂರು ದಿನಗಳಲ್ಲಿ ಮೂರನೇ ಬಾರಿ ಕೋವಿಡ್‌ಗೆ ಸಂಬಂಧಿಸಿದ ಪ್ರಕರಣ ವರದಿಯಾಗಿದೆ. ಗುರುವಾರ 52 ವಯಸ್ಸಿನ ಪೌರ ಕಾರ್ಮಿಕ ಕೋವಿಡ್ ವೈರಸ್ ಸೋಂಕಿಗೆ ಒಳಗಾಗಿದ್ದರು. ಬುಧವಾರ 52 ವಯಸ್ಸಿನ ವ್ಯಕ್ತಿ ಕೊರೋನವೈರಸ್‌ಗೆ ಸಾವನ್ನಪ್ಪಿದ್ದರು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News