ದೀಪ ಹಚ್ಚಿದಾಗ ವೈರಸ್ ಗಳು ಹತ್ತಿರ ಬಂದು ಶಾಖ ತಟ್ಟಿ ಸಾಯುತ್ತವೆ: ಶಾಸಕ ರಾಮದಾಸ್

Update: 2020-04-04 06:35 GMT

ಮೈಸೂರು, ಎ.4: ದೀಪದ ಶಾಖಕ್ಕೆ ವೈರಸ್ ಗಳು ಸಾಯುವುದರಿಂದ ನಾಳೆ ಎಲ್ಲರೂ ತಮ್ಮ ತಮ್ಮ ಮನೆಯ ಲೈಟ್ ಗಳನ್ನು ಆಫ್ ಮಾಡಿ ದೀಪ ಹಚ್ಚಿ ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಕೆ.ಆರ್.ಕ್ಷೇತ್ರದ ವಿವಿಧೆಡೆ ಸಾರ್ವಜನಿಕರಿಗೆ ಶನಿವಾರ ಮಾಸ್ಕ್ ಮತ್ತು ಮೊಂಬತ್ತಿ ವಿತರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೊರೋನ ಹಿನ್ನಲೆಯಲ್ಲಿ ವೈರಾಣುಗಳು ಹರಡುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎ.5ರ ರವಿವಾರ ರಾತ್ರಿ ನಿಮ್ಮ ಮನೆಯ ಲೈಟ್ ಆಫ್ ಮಾಡಿ ಮುಂಭಾಗದ ಬಾಲ್ಕನಿಯಲ್ಲಿ ದೀಪ ಹಚ್ಚಿ ನಿಲ್ಲಿ ಎಂದು ಹೇಳಿದ್ದಾರೆ. ಅದರಂತೆ ನಾವು ನಡೆದುಕೊಳ್ಳೋಣ. ದೀಪ ಹಚ್ಚುವುದರಿಂದ ಆ ಬೆಳಕಿನ ಶಾಖಕ್ಕೆ ವೈರಾಣುಗಳು ಸಾಯಲಿವೆ. ಹಾಗಾಗಿ ಮೋದಿ ಅವರು ದೇಶದ ಜನತೆಗೆ ಕರೆಕೊಟ್ಟಿದ್ದಾರೆ ಎಂದು ಹೇಳಿದರು.

ಎಲ್ಲವನ್ನು ಕತ್ತಲೆ ಮಾಡಿ ಬರೀ ದೀಪದ ಬೆಳಕು ಕಾಣುವಂತೆ ಮಾಡಿದಾಗ ಆ ವೈರಸ್ ಗಳು ದೀಪದ ಬಳಿ ಬರಲಿವೆ. ಆಗ ದೀಪದ ಶಾಖ ತಟ್ಟಿ ಅವು ಸಾಯಲಿವೆ. ಹಾಗಾಗಿ ಎಲ್ಲರೂ ನಾಳೆ ದೀಪ ಹಚ್ಚೋಣ ಎಂದರು.

ದೀಪ ಶಾಂತಿಯ ಸಂಕೇತ. ಹಾಗಾಗಿ ದೇಶ ಶಾಂತಿಯಿಂದ ಕೂಡಿರಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News