ರಾಜ್ಯದಲ್ಲಿ ಕೊರೋನ ಸೋಂಕಿನ ನಡುವೆ ಎಚ್1ಎನ್1 ಭೀತಿ !

Update: 2020-04-04 14:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.4: ರಾಜ್ಯದಲ್ಲಿ ಕೊರೋನ ಸೋಂಕಿನ ನಡುವೆಯೇ ಎಚ್1ಎನ್1 ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದು, ಕಳೆದ ಮೂರು ತಿಂಗಳಲ್ಲಿ 461 ಮಂದಿ ಜ್ವರದಿಂದ ಬಳಲಿದ್ದಾರೆ.

ಕಳೆದ ವರ್ಷ ಈ ಸೋಂಕಿನಿಂದ ಎರಡು ಸಾವಿರಕ್ಕೂ ಅಧಿಕ ಮಂದಿ ಬಳಲಿದ್ದು, ಐದು ವರ್ಷಗಳಲ್ಲಿ ಅತಿ ಹೆಚ್ಚು ಸಾವು ವರದಿಯಾಗಿತ್ತು. 2010ರಲ್ಲಿ 120 ಮಂದಿ ಈ ಜ್ವರದಿಂದಾಗಿ ಮೃತಪಟ್ಟಿದ್ದರು. ಈಗ ಮತ್ತೆ ಸೋಂಕು ಹರಡಲು ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ 184 ಪ್ರಕರಣಗಳು ವರದಿಯಾಗಿವೆ.

ಉಡುಪಿ 71, ಶಿವಮೊಗ್ಗ 64, ಬೆಂಗಳೂರು ನಗರ 64, ದಕ್ಷಿಣ ಕನ್ನಡ 22, ಬೆಂಗಳೂರು ಗ್ರಾಮಾಂತರ 9 ಜನರು ಎಚ್1ಎನ್1ನಿಂದ ಬಳಲಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿಯೂ ಎಚ್1ಎನ್1 ಹರಡಿದ್ದು, ಮಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News