ಮನೆಯ ಹೊರಗೆಯೂ ಮಾಸ್ಕ್ ಧರಿಸುವಂತೆ ಜನತೆಗೆ ಟ್ರಂಪ್ ಆಡಳಿತ ಸೂಚನೆ

Update: 2020-04-04 17:42 GMT

ವಾಶಿಂಗ್ಟನ್‌, ಎ.4: ಕೊರೋನ ವೈರಸ್ ಸೋಂಕು ಕೇವಲ ಸಹಜ ಉಸಿರಾಟದ ಮೂಲಕವೂ ಹರಡುವ ಸಾಧ್ಯತೆಯಿರುವುದಾಗಿ ಸಂಶೋನಾ ವರದಿಯೊಂದರ ಬಗ್ಗೆ ಗಮನಸೆಳೆದಿರುವ ಅಮೆರಿಕ ಸರಕಾರವು, ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್‌ಗಳನ್ನು ಧರಿಸಬೇಕೆಂದು ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.

ಅಮೆರಿಕದಲ್ಲಿ ಕೊರೋನಾ ವೈರಸ್‌ನಿಂದ ಸಾವನ್ನಪ್ಪಿರುವ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಈ ಮಾರಕ ಸೋಂಕು ಹರಡುವುದನ್ನು ಪರಿಣಾಮಕಾರಿಆಗಿ ತಡೆಗಟ್ಟಲು ಸರಳವಾದ ಮಾಸ್ಕ್‌ಗಳು ಅಥವಾ ಸ್ಕಾರ್ಫ್‌ಗಳ ಬಳಕೆ ನೆರವಾಗಬಹುದು ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಶುಕ್ರವಾರ ಜನತೆಗೆ ಸಲಹೆ ನೀಡಿದೆ.

ಕೊರೋನಾ ಹಾವಳಿಯಿಂದ ತೀವ್ರವಾಗಿ ಬಾಧಿತವಾಗಿರುವ ನ್ಯೂಯಾರ್ಕ್ ನಗರದಲ್ಲಿ ಜನತೆ ಮಾಸ್ಕ್‌ಗಳನ್ನು ಧರಿಸುವಂತೆ ಳೆದ ಕೆಲವು ದಿನಗಳಿಂ ಸಲಹೆ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News