ಬಾಗಲಕೋಟೆ: ಅಪಾಯಕಾರಿ ಸ್ಫೋಟಕ ವಸ್ತುಗಳನ್ನು ಶೇಖರಣೆ ಮಾಡಿದ್ದ ವ್ಯಕ್ತಿಯ ಬಂಧನ

Update: 2020-04-07 16:51 GMT

ಬಾಗಲಕೋಟೆ, ಎ.6: ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಅಕ್ರಮವಾಗಿ ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಬಿಟಿಎಂ ಲೇಔಟ್ ನಿವಾಸಿ ರೇಣುಕಾಪ್ರಸಾದ್(53) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನಿಂದ 400 ಲೀಟರ್ ಐಸೋಪ್ರೊಪೈಲ್ ಆಲ್ಕೋಹಾಲ್, 210 ಲೀಟರ್ ಟಾಲಿನ್, 100 ಲೀಟರ್ ಟರ್ಪಂಟೈನ್, 600 ಲೀಟರ್ ಅಸಿಟೋನ್, 50 ಲೀಟರ್ ಬೆಂಜೈಲ್ ಆಲ್ಕೋಹಾಲ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಸುಧಾಮನಗರ 1ನೇ ಮುಖ್ಯರಸ್ತೆ, ಕಟ್ಟಡವೊಂದರಲ್ಲಿ ಯಾವುದೇ ಪರವಾನಿಗೆ ಪಡೆಯದೆ ಐಸೋಪ್ರೊಪೈಲ್ ಆಲ್ಕೋಹಾಲ್ ಇನ್ನಿತರ ಸ್ಫೋಟಕ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ

ಆರೋಪಿಯು ಸ್ಫೋಟಕ ರಾಸಾಯನಿಕಗಳಾದ ನೈಟ್ರೋ ಬೆಂಜಿನ್, ಸಿಲಿಕಾನ್ ಆಯಿಲ್, ಲಿಕ್ವಿಡ್ ಪ್ಯಾರಫಿನ್ ಗ್ಲಿಸರಿನ್, ಮಿಥಿಲಿನ್ ಕ್ಲೋರೈಡ್, ಕ್ಯಾಸ್ಟ್ರಾಕ್ಸ್, ಪ್ರೊಪಿಲಿನ್ ಗ್ಲೈಕಾಲ್, ಪಾಲಿ ಎಥಿಲಿನ್ ಗ್ಲೈಕಾಲ್ ಇನ್ನಿತರ ಅಪಾಯಕಾರಿ ಸ್ಫೋಟಕಗಳನ್ನು ಡ್ರಂಗಳಲ್ಲಿ ಶೇಖರಿಸಿ ಇಟ್ಟುಕೊಂಡಿದ್ದನು. ಕೊರೋನ ವೈರಸ್ ನಿರ್ಮೂಲನೆಗೆ ಬಳಸುವ ಸ್ಯಾನಿಟೈಸರ್ ಬೇಡಿಕೆ ಹೆಚ್ಚಾಗಿರುವ ಲಾಭ ಪಡೆದು ನಕಲಿ ಸ್ಯಾನಿಟೈಸರ್ ತಯಾರು ಮಾಡುವವರಿಗೆ ಈ ರಾಸಾಯನಿಕಗಳನ್ನು ಪೂರೈಸುತ್ತಿದ್ದ ಎಂದು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಆರೋಪಿಯು ರಾಸಾಯನಿಕಗಳನ್ನು ಶೇಖರಿಸುತ್ತಿದ್ದ ಗೋಡೌನ್ ಮೇಲೆ ದಾಳಿ ನಡೆಸಿ, ಸ್ಫೋಟಕ ರಾಸಾಯನಿಕಗಳನ್ನು ವಶಪಡಿಸಿಕೊಂಡು ವಿಲ್ಸನ್ ಗಾರ್ಡ್‍ನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News