ಲಾಕ್ ಡೌನ್ ಮುಂದುವರಿಯುವ ಆತಂಕ: ಹಿಂಸಾಚಾರಕ್ಕಿಳಿದ ವಲಸೆ ಕಾರ್ಮಿಕರು; ಕಲ್ಲು ತೂರಾಟ

Update: 2020-04-11 09:24 GMT

ಸೂರತ್: ಲಾಕ್ ಡೌನ್ ವಿಸ್ತರಣೆಯಾಗಬಹುದೆಂಬ ಭಯದಿಂದ ಸೂರತ್‍ನಲ್ಲಿ ವಲಸಿಗ ಕಾರ್ಮಿಕರು ಹಿಂಸಾಚಾರದಲ್ಲಿ ತೊಡಗಿದ ಘಟನೆ ನಡೆದಿದೆ.

"ಕಾರ್ಮಿಕರು ರಸ್ತೆ ತಡೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಸುಮಾರು 60ರಿಂದ 70 ಮಂದಿಯನ್ನು ಬಂಧಿಸಿದ್ದಾರೆ'' ಎಂದು ಸೂರತ್ ಡಿಸಿಪಿ ರಾಕೇಶ್ ಬರೋಟ್ ಹೇಳಿದ್ದಾರೆ.  ತಮಗೆ ಮನೆಗೆ ತೆರಳಲು ಅನುಮತಿಸಬೇಕು ಎಂದು ಕಾರ್ಮಿಕರು ಬೇಡಿಕೆಯಿಟ್ಟಿದ್ದರೆನ್ನಲಾಗಿದೆ.

ಕೊರೋನ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಲಾಕ್ ಡೌನ್ ವಿಸ್ತರಣೆಗೆ ಮನವಿ ಮಾಡಿರುವುದರಿಂದ ಎಪ್ರಿಲ್ 14ರ ನಂತರವೂ ಲಾಕ್‍ಡೌನ್ ವಿಸ್ತರಣೆಯಾಗುವುದು ಎಂಬ ಸುದ್ದಿಗಳು ಕಾರ್ಮಿಕರನ್ನು ಕಂಗೆಡಿಸಿತ್ತೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News