ಕೊಡಗಿನಲ್ಲಿ 7 ಡೆಂಗ್ ಪ್ರಕರಣ ಪತ್ತೆ

Update: 2020-04-23 18:30 GMT

ಮಡಿಕೇರಿ ಏ.23 : ಕೊರೋನ ವೈರಸ್ ಭೀತಿ ನಡುವೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಇದುವರೆಗೆ 7 ಡೆಂಗ್ ಪ್ರಕರಣಗಳು ವರದಿಯಾಗಿವೆ.

ಜಿಲ್ಲಾಡಳಿತ ಇದನ್ನು ದೃಢಪಡಿಸಿದ್ದು ಕೊಡಗಿನ ನಂಜರಾಯಪಟ್ಟಣ ಹಾಗೂ ಸಂಪಾಜೆಯಲ್ಲಿ ತಲಾ ಒಂದು, ಕೂಡಿಗೆಯಲ್ಲಿ 3 ಹಾಗೂ ಸುಂಟಿಕೊಪ್ಪದಲ್ಲಿ ಎರಡು ಡೆಂಗ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

ಜಿಲ್ಲೆಯ ಜನರು ಕೊರೋನ ಮುನ್ನೆಚ್ಚರಿಕೆಯ ಜೊತೆಗೆ ಡೆಂಗ್ ಬಗ್ಗೆಯೂ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೋರಿದ್ದಾರೆ.

ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಮತ್ತು ನೀರು ನಿಲ್ಲದಂತೆ ಎಚ್ಚರ ವಹಿಸಲು ಹಾಗೂ ಕಾಲ ಕಾಲಕ್ಕೆ ಆರೋಗ್ಯ ಇಲಾಖೆಯಿಂದ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News