ಕೋವಿಡ್ -19: ಕೇರಳದಲ್ಲಿ ನಾಲ್ಕು ತಿಂಗಳ ಮಗು ಸಾವು

Update: 2020-04-24 06:49 GMT
ಸಾಂದರ್ಭಿಕ ಚಿತ್ರ

ಕಲ್ಲಿಕೋಟೆ, ಎ.24: ಕೊರೋನ  ವೈರಸ್‌ ಸೋಂಕಿನಿಂದ ನಾಲ್ಕು ತಿಂಗಳ ಮಗು ಮೃತಪಟ್ಟ ಘಟನೆ ಕೇರಳದ ಕೋಝಿಕ್ಕೋಡ್ ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

 ಮೃತಪಟ್ಟ ಮಗುವಿಗೆ  ಹುಟ್ಟಿನಿಂದಲೇ ಹೃದಯ  ಸಂಬಂಧಿ ಕಾಯಿಲೆ  ಇತ್ತು ಎಂದು ಮೂಲಗಳು ತಿಳಿಸಿವೆ

ಮಗು ಇದೀಗ ನ್ಯುಮೋನಿಯಾದಿಂದ ಬಳಲುತ್ತಿತ್ತು ಎನ್ನಲಾಗಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ಮಗು  ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.

 ಕೇರಳದಲ್ಲಿ ಇದುವರೆಗೆ ಸುಮಾರು 450 ಕೋವಿಡ್ -19  ಪ್ರಕರಣಗಳು ದೃಢಪಟ್ಟಿದೆ. ಮೂರು ಸಾವು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News