ಉಡುಪಿ: ಜಿಲ್ಲಾಸ್ಪತ್ರೆಗೆ ಗುತ್ತಿಗೆ ಆಧಾರದ ನೇಮಕ; ಮೇ13ರಂದು ನೇರ ಸಂದರ್ಶನ

Update: 2020-05-08 16:35 GMT

ಉಡುಪಿ, ಮೇ 8:ಕೋವಿಡ್-19 ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಿ ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯರುವ ಹುದ್ದೆಗಳಿಗೆ, ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಈ ಮೊದಲೇ ಪ್ರಕಟಣೆ ನೀಡಿದ್ದು, ಹೆಚ್ಚಿನ ಹುದ್ದೆಗಳು ಭರ್ತಿಯಾಗದ ಕಾರಣ ಹಲವು ಹುದ್ದೆಗಳು ಖಾಲಿ ಇವೆ.

ಖಾಲಿ ಇರುವ ಹುದ್ದೆಗಳಿಗಾಗಿ ಇದೇ ಮೇ 13ರಂದು ಬೆಳಗ್ಗೆ 10 ಗಂಟೆಗೆ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನರ ಕೊಠಡಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಖಾಲಿ ಹುದ್ದೆ ವಿವರ: ವೈದ್ಯರು/ತಜ್ಞರು 6 ಹುದ್ದೆಗಳು (ವೇತನ- 60,000), ವಿದ್ಯಾರ್ಹತೆ: ಎಂಬಿಬಿಎಸ್/ತಜ್ಞತೆ (ಮಾನ್ಯತೆ ಪಡೆದ ವಿವಿಯಿಂದ ಪದವಿ), ಶುಶ್ರೂಶಕರು- 16 ಹುದ್ದೆಗಳು (ವೇತನ 20,000), ವಿದ್ಯಾರ್ಹತೆ : ಕರ್ನಾಟಕ ಸರಕಾರದ ನೊಂದಾಯಿತ ಸಂಸ್ಥೆಯಿಂದ ಜಿ.ಎನ್.ಎಂ/ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು.

ಅರ್ಜಿಯೊಂದಿಗೆ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ಸಂದರ್ಶನಕ್ಕೆ ಬರುವಾಗ ತರಬೇಕು, ಹೆಚ್ಚಿನ ಮಾಹಿತಿಗೆ ಜಿಲ್ಲಾ ಸರ್ಜನ್‌ರ ಮೊಬೈಲ್ ಸಂ.:9449843181 ಅಥವಾ ಜಿಲ್ಲಾ ಸರ್ಜನರ ಕಚೇರಿ ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಸರ್ಜನ್‌ರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News