ಎಸೆಸೆಲ್ಸಿ ಪರೀಕ್ಷೆ ಬಳಿಕ ಶೈಕ್ಷಣಿಕ ಮಾರ್ಗಸೂಚಿ ಪ್ರಕಟ ಸಾಧ್ಯತೆ

Update: 2020-05-10 17:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 10: ಲಾಕ್‍ಡೌನ್ ಮುಗಿದು ಎಸೆಸೆಲ್ಸಿ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದೆ. ಸುರಕ್ಷಿತ ಅಂತರ ಕಾಯ್ದು ಕಾಯ್ದುಕೊಳ್ಳುವಂತೆ, ಮಕ್ಕಳು ತರಗತಿ ಕೊಠಡಿಯಲ್ಲಿ ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಸದ್ಯ ಬೆಂಚ್ ಅಂತರ ಹೆಚ್ಚಿಸುವ ಜತೆಗೆ ಒಂದು ಬೆಂಚ್‍ನಲ್ಲಿ ಇಬ್ಬರಿಗೆ ಕುಳಿತುಕೊಳ್ಳಲು ಅವಕಾಶ, ಮಕ್ಕಳಿಗೆ ಶಾಲೆಗಳಲ್ಲೇ ಮಾಸ್ಕ್ ವ್ಯವಸ್ಥೆ ಮಾಡಬಹುದೇ ಅಥವಾ ಮನೆಯಿಂದ ಧರಿಸಿ ಬರುವ ನೀತಿ ಜಾರಿಗೊಳಿಸಬಹುದೇ ಎಂಬುದರ ಜತೆಗೆ ಮಕ್ಕಳಿಗೆ ತಿಳಿವಳಿಕೆ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಲಾಕ್‍ಡೌನ್ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾದರೆ ತರಗತಿ ಕೊಠಡಿಗಳು ಮತ್ತು ಡೆಸ್ಕ್ ಸಂಖ್ಯೆ ಹೆಚ್ಚಿಸಬೇಕು. ಅದು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಬ್ಯಾಚ್‍ಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತರಗತಿ ನಡೆಸುವ ಅವಕಾಶ ಇದೆಯಾದರೂ ಅದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದೂ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News