8 ಸಂಭಾವ್ಯ ಕೋವಿಡ್-19 ಲಸಿಕೆಗಳು ಕ್ಲಿನಿಕಲ್ ಪರೀಕ್ಷೆಯಲ್ಲಿ: ಡಬ್ಲ್ಯುಎಚ್‌ಒ

Update: 2020-05-17 17:21 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 17: ಕೋವಿಡ್-19ರ ಎಂಟು ಸಂಭಾವ್ಯ ಲಸಿಕೆಗಳು ಈಗ ಕ್ಲಿನಿಕಲ್ ಪರೀಕ್ಷೆಯ ಹಂತಗಳಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಘೆ (ಡಬ್ಲ್ಯುಎಚ್‌ಒ) ತಿಳಿಸಿದೆ. ಅದೇ ವೇಳೆ, ಇನ್ನೂ 110 ಸಂಭಾವ್ಯ ಲಸಿಕೆಗಳು ಅಭಿವೃದ್ಧಿಯ ವಿವಿಧ ಮಜಲುಗಳಲ್ಲಿವೆ ಎಂದು ಅದು ಹೇಳಿದೆ.

ಮಾರಕ ಸಾಂಕ್ರಾಮಿಕದ ಪಿಡುಗನ್ನು ನಿವಾರಿಸಲು ಜಗತ್ತಿನಾದ್ಯಂತ ದೇಶಗಳು ಪರದಾಡುತ್ತಿರುವಂತೆಯೇ, ಅಮೆರಿಕ, ಚೀನಾ ಮತ್ತು ಜರ್ಮನಿ ಮುಂತಾದ ದೇಶಗಳು ಸಾಂಕ್ರಾಮಿಕಕ್ಕೆ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಮುಂಚೂಣಿಯ ಹಂತಗಳಲ್ಲಿವೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಅಷ್ಟೇ ಅಲ್ಲದೆ, ತಮ್ಮ ಲಸಿಕೆಗಳು ಸಿದ್ಧಗೊಳ್ಳುವ ಪ್ರಾಯೋಗಿಕ ದಿನಾಂಕವನ್ನೂ ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ದೇಶಗಳು ಈಗಾಗಲೇ ಪ್ರಕಟಿಸಿವೆ.

ಮಾನವರಿಗೆ ಕೊರೋನ ವೈರಸ್ ವಿರುದ್ಧದ ಯಶಸ್ವಿ ಲಸಿಕೆಯನ್ನು 2021ರ ಮಾರ್ಚ್ ವೇಳೆಗೆ ನೀಡಬಹುದಾಗಿದೆ ಎಂದು ಚೀನಾದ ಆರೋಗ್ಯ ಅಧಿಕಾರಿ ಝಾಂಗ್ ವೆನ್‌ಹಾಂಗ್ ಶನಿವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News