ಕೊರೋನಕ್ಕೆ ಹೊಸ ಔಷಧ ಅಭಿವೃದ್ಧಿಪಡಿಸುತ್ತಿರುವ ಚೀನಾದ ಪ್ರಯೋಗಾಲಯ

Update: 2020-05-19 05:38 GMT

ಬೀಜಿಂಗ್, ಮೇ 19: ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆಯನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ ಎಂದು ನಂಬಿರುವ ಔಷಧವನ್ನು ಚೀನಾದ ಪ್ರಯೋಗಾಲಯ ಅಭಿವೃದ್ಧಿಪಡಿಸುತ್ತಿದೆ.

ಕೊರೋನ ವೈರಸ್ ಕಳೆದ ವರ್ಷಾಂತ್ಯದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದು ಇದೀಗ ವಿಶ್ವದಾದ್ಯಂತ ವ್ಯಾಪಿಸಿದೆ. ಈ ಕಾಯಿಲೆಗೆ ಚಿಕಿತ್ಸೆ ಹಾಗೂ ಲಸಿಕೆಗಳನ್ನು ಕಂಡುಹಿಡಿಯಲು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರೇರೇಪಣೆ ನೀಡಿದೆ.

ಚೀನಾದ ಪ್ರತಿಷ್ಠಿತ ಪೀಕಿಂಗ್ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳಿಂದ ಪರೀಕ್ಷಿಸಲ್ಪಡುತ್ತಿರುವ ಔಷಧವು ಸೋಂಕಿತರಿಗೆ ಚೇತರಿಕೆಯ ಸಮಯವನ್ನು ಕಡಿಮೆ ಮಾಡಲು ಮಾತ್ರವಲ್ಲ ವೈರಸ್‌ನಿಂದ ಅಲ್ಪಾವಧಿಯ ವಿನಾಯತಿಯನ್ನು ನೀಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಪ್ರಾಣಿಗಳ ಪರೀಕ್ಷೆಗಳ ಹಂತದಲ್ಲಿ ಔಷಧ ಯಶಸ್ವಿಯಾಗಿದೆ ಎಂದು ವಿಶ್ವವಿದ್ಯಾಲಯದ ಬೀಜಿಂಗ್ ಅಡಾನ್ಸ್‌ಡ್ ಇನ್ನೋವೇಶನ್ ಸೆಂಟರ್ ಫಾರ್ ಜಿನೊಮಿಕ್ಸ್ ನಿರ್ದೇಶಕ ಸನ್ನಿ ಕ್ಸಿ ಎಎಫ್‌ಪಿಗೆ ತಿಳಿಸಿದ್ದಾರೆ.

ನಾವು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಸೋಂಕಿತ ಇಲಿಗೆ ಚುಚ್ಚಿದಾಗ ಐದು ದಿನಗಳ ನಂತರ ವೈರಲ್ ಭಾರ 2,500 ಅಂಶ ಕಡಿಮೆಯಾಗಿದೆ ಎಂದು ಕ್ಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News