ಮಾಸ್ಕ್ ಬದಲಾಯಿಸಿಕೊಂಡು ಮದುವೆಯಾದ ನವದಂಪತಿಗಳು

Update: 2020-05-19 14:46 GMT
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಮೇ 19: ಕೊರೋನ ಲಾಕ್‍ಡೌನ್ ಇದ್ದ ಕಾರಣ ಇದುವರೆಗೆ ಮದುವೆ ನಡೆಯುವುದೇ ದುಸ್ತರವಾಗಿತ್ತು. ಜಿಲ್ಲೆಯಲ್ಲಿಂದು ನಡೆದ ಸರಳ ಮದುವೆ ಸಮಾರಂಭವೊಂದರಲ್ಲಿ ನವ ದಂಪತಿಗಳು ಹಾರ ಬದಲಾಯಿಸಿಕೊಳ್ಳುವ ಜತೆಗೆ ಮಾಸ್ಕ್ ಬದಲಾಯಿಸಿಕೊಳ್ಳುವ ಮೂಲಕ ಕೊರೋನ ಜಾಗೃತಿ ಮೂಡಿಸಿದರು.

ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಸರಳ ವಿವಾಹವಾದ ನವ ದಂಪತಿಗಳು ಮಾದರಿಯಾಗಿ ಸೋಂಕಿನ ಜಾಗೃತಿ ಮೂಡಿಸಿ ಎಲ್ಲರ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News