ಮೇ 20ರಿಂದ ಏಳು ದಿನಗಳವರೆಗೆ 'ಶ್ರಮಿಕ್ ಹಕ್ಕು ಅಭಿಯಾನ'

Update: 2020-05-19 16:07 GMT

ಬೆಂಗಳೂರು, ಮೇ 19: ಜನಹಿತ ಕಾಯುವ ಸರಕಾರ, ಕಾರ್ಮಿಕ ಮತ್ತು ಕೃಷಿ ವಲಯದ ನೀತಿಗಳನ್ನು ತಿರುಚುವ ಕೆಲಸ ಕೈ ಬಿಡಬೇಕು. ಯಾವುದೇ ಕಾರಣಕ್ಕೂ ಕಾರ್ಪೋರೇಟ್ ಕಂಪೆನಿಗಳ ಒತ್ತಡಕ್ಕೆ ಮಣಿಯಬಾರದೆಂದು ಒತ್ತಾಯಿಸಿ ಇಂದಿನಿಂದ(ಮೇ 20) ಏಳು ದಿನಗಳವರೆಗೆ ‘ಶ್ರಮಿಕ್ ಹಕ್ಕು ಅಭಿಯಾನ’ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಜನಶಕ್ತಿ, ಕರ್ನಾಟಕ ಶ್ರಮಿಕ್ ಶಕ್ತಿ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ, ಭಾರತೀಯ ಫ್ಯಾಸಿಸ್ಟ್ ವಿರೋಧಿ ಒಕ್ಕೂಟ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಆಹಾರ ಹಕ್ಕು ಸಮಿತಿ, ಕರ್ನಾಟಕ ರೈತ ಸಂಘಟನೆ ನೇತೃತ್ವದಲ್ಲಿ ಈ ಅಭಿಯಾನ ಆಯೋಜಿಸಲಾಗಿದೆ.

ಈ ಬಗ್ಗೆ ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಗಳ ಪದಾಧಿಕಾರಿಗಳು, ಕೊರೋನ ಸೋಂಕು ಪಿಡುಗಿನಿಂದ ಕಾರ್ಮಿಕರು, ರೈತ ವರ್ಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಮತ್ತು ರೈತರ ಹಿತ ಕಾಯಲು ಇರುವ ಕಾನೂನುಗಳನ್ನು ಕಿತ್ತು ಕಾರ್ಪೋರೇಟ್ ಶಕ್ತಿಗಳ ದರೋಡೆಗೆ ಅವಕಾಶ ಮಾಡಿಕೊಡುವ ನೀತಿಗಳನ್ನು ಕೇಂದ್ರ ಸರಕಾರ ಪ್ರಸ್ತಾಪಿಸುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News