ಐಸಿಎಸ್‌ಇ 10ನೇ, ಐಎಸ್‌ಸಿ 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Update: 2020-05-22 18:33 GMT

ಹೊಸದಿಲ್ಲಿ, ಮೇ 22: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಶನ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ಶುಕ್ರವಾರ ಐಎಸ್‌ಇ ಮತ್ತು ಐಎಸ್‌ಸಿ 2020ನೇ ಸಾಲಿನ ಪರೀಕ್ಷೆಗಳ ಉಳಿದ ವಿಷಯಗಳ ಪರಿಷ್ಕೃತ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಐಸಿಎಸ್‌ಇ ಹತ್ತನೇ ತರಗತಿಯ ಪರೀಕ್ಷೆಗಳು ಜುಲೈ 2 ರಿಂದ ಜುಲೈ 12 ರವರೆಗೆ ನಡೆಯಲಿದ್ದು, ಹನ್ನೆರಡನೇ ತರಗತಿಯ ಐಸಿಇ ಪರೀಕ್ಷೆಗಳು ಜುಲೈ 1 ರಿಂದ ಜುಲೈ 14 ರವರೆಗೆ ನಡೆಯಲಿದೆ.

ಕೊರೋನ ವೈರಸ್ ಸೋಂಕು ಕಾರಣದಿಂದಾಗಿ ಐಎಸ್‌ಸಿ ಅಥವಾ 12ನೇ ವಿದ್ಯಾರ್ಥಿಗಳಿಗೆ 8 ಪತ್ರಿಕೆಗಳ ಪರೀಕ್ಷೆ ಬಾಕಿ ಉಳಿದಿದ್ದರೆ, ಐಸಿಎಸ್‌ಇ ಅಥವಾ 10 ನೇ ತರಗತಿಯ 6 ವಿಷಯಗಳಿಗೆ ಪರೀಕ್ಷೆಗಳನ್ನು ಮುಂದೂಡಬೇಕಾಯಿತು. ಕೌನ್ಸಿಲ್ ಉಳಿದ ಪರೀಕ್ಷೆಗಳನ್ನು ನಡೆಸಿದ ನಂತರ ಅದು 6-8 ವಾರಗಳ ಅವಧಿಯಲ್ಲಿ ಫಲಿತಾಂಶಗಳನ್ನು ಪ್ರಕಟಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News