ಕೊರೋನ ಸಂಕಷ್ಟದಿಂದ ಪಾರಾಗಲು ಪ್ರಾರ್ಥಿಸಿ: ಈದುಲ್ ಫಿತ್ರ್ ಶುಭಕೋರಿ ಸಚಿವ ರಮೇಶ್ ಜಾರಕಿಹೊಳಿ

Update: 2020-05-23 12:23 GMT

ಬೆಂಗಳೂರು, ಮೇ 23: ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಪ್ರತೀಕವಾಗಿರುವ ಮುಸ್ಲಿಮರ ಪವಿತ್ರ ಈದುಲ್ ಫಿತ್ರ್ ನಾಡಿನ ಜನತೆಗೆ ಸುಖ, ನೆಮ್ಮದಿಯನ್ನು ತರಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗ ಶುಭ ಕೋರಿದ್ದಾರೆ.

ಎಲ್ಲೆಡೆ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದಂತೆ ಮುಸ್ಲಿಮರು ಈದುಲ್ ಫಿತ್ರ್ ಅನ್ನು ತಮ್ಮ ತಮ್ಮ ಮನೆಯಲ್ಲೇ ಆಚರಿಸಬೇಕು. ದೇಶವನ್ನು ಕೊರೋನ ಸೋಂಕಿನ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಎಲ್ಲರೂ ಹೊರಗಡೆ ಸಂಚರಿಸುವ ವೇಳೆ ತಪ್ಪದೆ ಮಾಸ್ಕ್ ಧರಿಸಬೇಕು. ಎಲ್ಲೆ ಇದ್ದರೂ ಸ್ಯಾನಿಟೈಸರ್ ಬಳಕೆ ಮಾಡಬೇಕು. ಕೊರೋನ ಸೋಂಕು ಹರಡದಂತೆ ತಡೆಗಟ್ಟಲು ಸುರಕ್ಷಿತ ಅಂತರ ಕಾಯ್ದುಕೊಂಡು ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ರಮೇಶ್ ಜಾರಕಿಹೊಳಿ ಇದೇ ವೇಳೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News