ಉಡುಪಿ ಜಿಲ್ಲಾಸ್ಪತ್ರೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ: ಮೇ 27ಕ್ಕೆ ನೇರ ಸಂದರ್ಶನ

Update: 2020-05-23 15:37 GMT

ಉಡುಪಿ, ಮೇ 23: ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಮತ್ತು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಹಾಗೂ ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಹುದ್ದೆಗಳಿಗೆ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ವೈದ್ಯರು /ತಜ್ಞರು 2 ಹುದ್ದೆಗಳು (ವೇತನ 60,000), ವಿದ್ಯಾರ್ಹತೆ: ಎಂಬಿಬಿಎಸ್/ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿವಿಯಿಂದ ಪದವಿ ಪಡೆದಿರಬೇಕು.), ಶುಶ್ರೂಷಕರು 5 ಹುದ್ದೆಗಳು (ವೇತನ 20,000), ವಿದ್ಯಾರ್ಹತೆ : ಕರ್ನಾಟಕ ಸರ್ಕಾರದ ನೊಂದಾಯಿತ ಸಂಸ್ಥೆಗಳಿಂದ ಜಿಎನ್‌ಎಂ /ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು. ಡಿ ಗ್ರೂಪ್ ನೌಕರರು 2 ಹುದ್ದೆಗಳು (ವೇತನ 12,000).

ಈ ಎಲ್ಲಾ ಹುದ್ದೆಗಳಿಗೆ ಮೇ 27 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನರ ಕೊಠಡಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅರ್ಜಿ ಯೊಂದಿಗೆ ವಿದ್ಯಾರ್ಹತೆಗೆ ಸಂಬಂದಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ಸಂದರ್ಶನಕ್ಕೆ ಬರುವಾಗ ತರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸರ್ಜನ್‌ರ ಮೊಬೈಲ್ ಸಂಖ್ಯೆ:9449843181 ಅಥವಾ 8310218759 (ಕಚೇರಿ) ಅಥವಾ ಜಿಲ್ಲಾ ಸರ್ಜನರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಸರ್ಜನ್‌ರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News