'ಮಸೀದಿ, ಚರ್ಚ್,ದೇವಸ್ಥಾನ ಪುನರಾರಂಭಕ್ಕೆ ಮುಂದಾಗಿರುವ ಸರ್ಕಾರದ ಪ್ರಯತ್ನ ಸ್ವಾಗತರ್ಹ'

Update: 2020-05-28 18:45 GMT

ಚಿಕ್ಕಮಗಳೂರು: ಈ ಮೂಲಕ ಸರ್ಕಾರ ಈ ಹಿಂದೆ 2 ತಿಂಗಳಿಂದ ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಮತ್ತು ಪೂಜಾ ಪುರಸ್ಕಾರಗಳನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಿ ಅರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿ ಕೊಂಡು ಸಹಕರಿಸಿದ್ದು ಶ್ಲಾಘನೀಯ ಎಂದು ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಹಾಜಿ ಮೊಹಮ್ಮದ್ ಶಾಹಿದ್  ತಿಳಿಸಿದ್ದಾರೆ.

 ಪ್ರಾರ್ಥನಾ ಮಂದಿರವನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರದ ಆದೇಶ ಪ್ರಕಟವಾದ ನಂತರ ಭಕ್ತಾದಿಗಳು ಕಾಲಕಾಲದ ಪ್ರಾರ್ಥನೆಗೆ ಆಗಮಿಸುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸುರಕ್ಷಿತ ಅಂತರ  ಕಾಪಾಡಿಕೊಂಡು ಹಾಗು ತಮ್ಮ ತಮ್ಮ ಆರೋಗ್ಯದ ಬಗ್ಗೆ ಸ್ವತಃ ನಿಗಾ ಇರಿಸಬೇಕು. 10 ವರ್ಷದ ಒಳಗಿನ ಮಕ್ಕಳು ಮತ್ತು 55 ವರ್ಷ ಮೇಲ್ಪಟ್ಟ ಹಿರಿಯರು ಪ್ರಾರ್ಥನಾ ಮಂದಿರದ ಬಳಿ ಬರಬಾರದು ಎಂದು ವಿನಂತಿಸಿಕೊಂಡರು ಮತ್ತು ದೇವಸ್ಥಾನ ಚರ್ಚ್ ಮಸೀದಿಗಳಲ್ಲಿ ಆಡಳಿತ ಸಮಿತಿಯವರು ಥರ್ಮಲ್ ಸ್ಕ್ಯಾನಿಂಗ್ ಜೊತೆಗೆ ಸ್ಯನಿಟ್ಟೈಜ್ ವ್ಯವಸ್ಥೆಯನ್ನು ಸಂಪೂರ್ಣವಾದ ಜವಾಬ್ದಾರಿ ಯೊಂದಿಗೆ ಬರುವ ಭಕ್ತರಿಗೆ ಸೌಜನ್ಯ ದಿಂದ ವರ್ತಿಸಬೇಕು ಆರೋಗ್ಯಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕಿಸಬೇಕಾಗಿ ಕರೆ ನೀಡಲಾಯಿತು. ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಮನವಿ ಮಾಡಿದರು ಎಂದು ಪ್ರಧಾನ ಕಾರ್ಯದರ್ಶಿ  ಹಾಜಿ ಫೈರೋಝ್ ಅಹಮದ್ ರಝ್ವಿ  ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News