2021ರ ಟ್ವೆಂಟಿ -20 ವಿಶ್ವಕಪ್ ಆತಿಥ್ಯ ಕೈತಪ್ಪುವ ಅಪಾಯವಿಲ್ಲ: ಬಿಸಿಸಿಐ

Update: 2020-05-29 05:48 GMT

ಹೊಸದಿಲ್ಲಿ, ಮೇ 28: ಕ್ರಿಕೆಟ್ ಮಂಡಳಿಯು ಟೂರ್ನಿಗೆ ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಹೊರತಾಗಿಯೂ ಮುಂದಿನ ವರ್ಷ ಟ್ವೆಂಟಿ-20 ವಿಶ್ವಕಪ್ ಹಕ್ಕಿನ ಆತಿಥ್ಯ ಕೈತಪ್ಪುವ ಅಪಾಯ ಭಾರತಕ್ಕಿಲ್ಲ ಎಂದು ಬಿಸಿಸಿಐನ ಪ್ರಮುಖ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಟೂರ್ನಿಗಳಿಗೆ ತೆರಿಗೆ ವಿನಾಯಿತಿಯ ಅವಶ್ಯಕತೆ ಇದೆ ಎಂದು ಆತಿಥೇಯರ ಒಪ್ಪಂದದಲ್ಲಿ ಪಟ್ಟಿ ಮಾಡಲಾಗಿದೆ. ಬಿಸಿಸಿಐ ಮೇ 18ರೊಳಗೆ ತೆರಿಗೆ ವಿನಾಯಿತಿ ಪಡೆದಿರುವ ಕುರಿತು ದೃಢಪಡಿಸಬೇಕಾಗಿತ್ತು.

ತೆರಿಗೆ ವಿನಾಯಿತಿ ವಿಚಾರಕ್ಕೆ ಸಂಬಂಧಿಸಿ ಭಾರತದಿಂದ ವಿಶ್ವಕಪ್ ಟೂರ್ನಿಯನ್ನು ದೂರ ಇಡುವ ಬೆದರಿಕೆಯನ್ನು ಐಸಿಸಿ ಹಾಕಿದೆ ಎಂದು ಎರಡು ಮಂಡಳಿಗಳ ಪತ್ರ ವ್ಯವಹಾರವನ್ನು ಉಲ್ಲೇಖಿಸಿ ‘ಇಎಸ್‌ಪಿಎನ್ ಕ್ರಿಕ್‌ಇನ್‌ಫೋ’ ವರದಿ ಮಾಡಿದೆ.

ಇಂತಹ ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲ. ಮಾತುಕತೆ ಮುಂದುವರಿದಿದೆ. ಟೂರ್ನಮೆಂಟ್‌ಗೆ ಯಾವುದೇ ಅಪಾಯವಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್ ತಿಳಿಸಿದ್ದಾರೆ. ಬಿಸಿಸಿಐ 2016ರಲ್ಲಿ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿತ್ತು. ಆಗ ಸರಕಾರ ವಿಶ್ವಕಪ್ ಟೂರ್ನಿಗೆ ತೆರಿಗೆ ವಿನಾಯಿತಿ ಒದಗಿಸಲು ನಿರಾಕರಿಸಿತ್ತು. ಮಂಡಳಿಯ ಮನವಿಗಳ ಹೊರತಾಗಿಯೂ ಕೇಂದ್ರ ಸರಕಾರ ತನ್ನ ನಿಲುವಿನಲಿ್ಲ ಯಾವುದೇ ಬದಲಾವಣೆ ಮಾಡಿರಲಿಲ್ಲ.

2016ರಲ್ಲಿ ತೆರಿಗೆ ವಿನಾಯಿತಿ ಒದಗಿಸಲು ವಿಫಲವಾಗಿರುವುದಕ್ಕೆ ಐಸಿಸಿ ಆಡಳಿತ ಮಂಡಳಿಯ ಅನುದಾನದಿಂದ ಭಾರತದ ಆದಾಯ ಪಾಲಿನಿಂದ ಐಸಿಸಿ ಸಮಾನ ಮೊತ್ತವನ್ನು ತಡೆ ಹಿಡಿದಿತ್ತು. ಈ ಬಾರಿ ಕೂಡ ಐಸಿಸಿ ಕಠಿಣ ನಿರ್ಧಾರವನು್ನ ತೆಗೆದುಕೊಳ್ಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News