ಪತ್ನಿಗೆ ಕೊರೋನ ವೈರಸ್ ಸೋಂಕು: ಉತ್ತರಾಖಂಡ ಸಚಿವರಿಗೆ ಕ್ವಾರಂಟೈನ್

Update: 2020-05-31 13:43 GMT

ಡೆಹ್ರಾಡೂನ್,ಮೇ 31: ಉತ್ತರಾಖಂಡ ಸಚಿವರೋರ್ವರ ಪತ್ನಿ ಕೊರೋನ ವೈರಸ್‌ಗೆ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಸಚಿವರು ಮತ್ತು ಅವರ ಅಧಿಕೃತ ನಿವಾಸದಲ್ಲಿ ವಾಸವಾಗಿರುವ 41 ಜನರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಸಚಿವರ ಪತ್ನಿಗೆ ಸೋಂಕು ತಗುಲಿರುವುದು ಶನಿವಾರ ಸಂಜೆ ದೃಢಪಟ್ಟಿದ್ದು,ಮುಂದಿನ ಚಿಕಿತ್ಸೆಗಾಗಿ ಹೃಷಿಕೇಶದಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿದೆ.

ಸಚಿವರ ನಿವಾಸದಲ್ಲಿ ವಾಸವಿರುವ 41 ಜನರ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು,ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಶನಿವಾರ ಉತ್ತರಾಖಂಡದಲ್ಲಿ 22 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ರಾಜ್ಯದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ 749ಕ್ಕೇರಿದೆ.

ಭಾರತದಲ್ಲಿ ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 8,380 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು,ಇದು ಒಂದು ದಿನದಲ್ಲಿ ದಾಖಲಾಗಿರುವ ಗರಿಷ್ಠ ಸಂಖ್ಯೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,82,143ಕ್ಕೇರಿದೆ. ಇದೇ ವೇಳೆ ಸಾವುಗಳ ಸಂಖ್ಯೆ 5,164ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News