ಕೊರೋನ ಬಳಿಕದ ಜಗತ್ತಿನಲ್ಲಿ ನ್ಯಾಯಯುತ ಸಮಾಜದ ಸ್ಥಾಪನೆಯಾಗಲಿ: ಪೋಪ್ ಫ್ರಾನ್ಸಿಸ್ ಕರೆ

Update: 2020-05-31 15:16 GMT

ವ್ಯಾಟಿಕನ್ ಸಿಟಿ (ಇಟಲಿ), ಮೇ 31: ಕೊರೋನ ವೈರಸ್ ಬಳಿಕದ ಜಗತ್ತಿನಲ್ಲಿ ನ್ಯಾಯಯುತ ಮತ್ತು ಸಮಾನತೆಯ ಸಮಾಜದ ಸ್ಥಾಪನೆಯಾಗಬೇಕು ಎಂದು ಪೋಪ್ ಫ್ರಾನ್ಸಿಸ್ ಶನಿವಾರ ಕರೆ ನೀಡಿದ್ದಾರೆ. ಅದೇ ವೇಳೆ, ಬಡತನದ ಸಾಂಕ್ರಾಮಿಕವನ್ನು ಕೊನೆಗೊಳಿಸುವಂತೆಯೂ ಅವರು ಜನರಿಗೆ ಕರೆ ನೀಡಿದ್ದಾರೆ.

ಒಮ್ಮೆ ನಾವು ಈ ಸಾಂಕ್ರಾಮಿಕದಿಂದ ಹೊರಬಂದ ಬಳಿಕ, ನಾವು ಹಿಂದೆ ಏನು ಮಾಡುತ್ತಿದ್ದೆವೋ ಹಾಗೂ ಹೇಗೆ ಮಾಡುತ್ತಿದ್ದೆವೋ ಅದನ್ನು ಆ ರಿತಿಯಲ್ಲಿ ಮಾಡಲು ನಮಗೆ ಸಾಧ್ಯವಾಗುವುದಿಲ್ಲ. ಎಲ್ಲವೂ ಬೇರೆಯಾಗಿರುತ್ತದೆ ಎಂದು ಅವರು ಹೇಳಿದರು.

ಪೆಂಟಕೋಸ್ಟ್ ಫೀಸ್ಟ್ ಸಂದರ್ಭದಲ್ಲಿ ಸ್ಪ್ಯಾನಿಶ್ ಭಾಷೆಯಲ್ಲಿ ನೀಡಿದ ವೀಡಿಯೊ ಸಂದೇಶವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕ ಸೇರಿದಂತೆ ಮಾನವತೆಗೆ ಒದಗಿದ ಈ ಅಗಾಧ ಸವಾಲುಗಳಿಂದ ಹೊರಬರುವಾಗ ಜನರು ಒಂದೋ ಬಲಿಷ್ಠರಾಗಿರುತ್ತಾರೆ ಅಥವಾ ದುರ್ಬಲರಾಗಿರುತ್ತಾರೆ. ಆದರೆ, ಹಿಂದಿನಂತೆ ಇರುವುದಿಲ್ಲ ಎಂದರು.

ಈ ಬಿಕ್ಕಟ್ಟಿನ ಮೂಲ ಪಾಠವನ್ನು ಕಲಿಯಲು ಜನರು ತಮ್ಮ ಮನಸ್ಸುಗಳು ಮತ್ತು ಹೃದಯಗಳನ್ನು ತೆರೆದಿಡಬೇಕು. ಆ ಪಾಠವೆಂದರೆ: ನಮ್ಮದು ಒಂದೇ ಮಾನವಕುಲ ಎಂದು ಪೋಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News