ಅಫ್ಘಾನ್: ಪತ್ರಿಕಾ ವಾಹನಕ್ಕೆ ಬಡಿದ ರಸ್ತೆ ಬದಿ ಬಾಂಬ್; ಪತ್ರಕರ್ತ ಸಾವು

Update: 2020-05-31 15:57 GMT

ಕಾಬೂಲ್ (ಅಫ್ಘಾನಿಸ್ತಾನ), ಮೇ 31: ಅಫ್ಘಾನಿಸ್ತಾನದ ಖಾಸಗಿ ಟೆಲಿವಿಶನ್ ಚಾನೆಲೊಂದರ ಸಿಬ್ಬಂದಿಯನ್ನು ಒಯ್ಯುತ್ತಿದ್ದ ವಾಹನವೊಂದಕ್ಕೆ ರಸ್ತೆ ಬದಿಯಲ್ಲಿದ್ದ ಬಾಂಬೊಂದು ಬಡಿದಾಗ ಸಂಭವಿಸಿದ ಸ್ಫೋಟದಲ್ಲಿ ಓರ್ವ ಪತ್ರಕರ್ತ ಮತ್ತು ಚಾಲಕ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಖುರ್ಷಿದ್ ಟಿವಿಯ 15 ಉದ್ಯೋಗಿಗಳಿದ್ದ ಬಸ್‌ಗೆ ಬಾಂಬ್ ಬಡಿದಾಗ ಈ ಇಬ್ಬರು ಮೃತಪಟ್ಟರು ಎಂದು ಚಾನೆಲ್‌ನ ಸುದ್ದಿ ಸಂಪಾದಕ ಜಾವೇದ್ ಫರ್ಹಾದ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News